ರಾಯಚೂರು: ವರುಣಾರ್ಭಟದ ನಡುವೆ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಈ ನಡುವೆ ಕೃಷ್ಣಾ ನದಿಯಿಂದ ಮೇಲೆದ್ದ ಮೊಸಳೆಗಳು ಹಿಂಡು ಹಿಂಡಾಗಿ ಗ್ರಾಮಕ್ಕೆ ನುಗ್ಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಆತ್ಕೂರು ಬಳಿ ಕೃಷ್ಣಾನದಿಯಲ್ಲಿ 20 ಮೊಸಳೆಗಳು ಪ್ರತ್ಯಕ್ಷವಾಗಿದ್ದು, ಮಳೆ ಅಬ್ಬರದ ನಡುವೆ ಮೊಸಳೆಗಳು ಸಾಲು ಸಾಲಾಗಿ ಆತ್ಕೂರು ಗ್ರಾಮಕ್ಕೆ ನುಗ್ಗಿವೆ. ಮನೆಗಳ ಸುತ್ತಮುತ್ತ ಮೊಸಳೆಗಳನ್ನು ಕಂಡು ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಮೀನುಗಾರರನ್ನು ಕರೆಸಿ ಜನರು ಮೊಸಳೆಗಳನ್ನು ಓಡಿಸಿದ್ದಾರೆ. ಜನರ ಗುಂಪನ್ನು ನೋಡುತ್ತಿದ್ದಂತೆ ಮೊಸಳೆಗಳು ಪುನಃ ಕೃಷ್ಣಾ ನದಿಯತ್ತ ಧಾವಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.