HomeKarnatakaಅಪಾಯಮಟ್ಟಕ್ಕೇರಿದ ನದಿಗೆ ಹಾರಿ ಯುವಕನ ಹುಚ್ಚಾಟ, ಪೊಲೀಸರೆದುರು ನಾನು ನುರಿತ ಈಜುಗಾರ ಎಂದು ಹೇಳಿಕೆ

ಅಪಾಯಮಟ್ಟಕ್ಕೇರಿದ ನದಿಗೆ ಹಾರಿ ಯುವಕನ ಹುಚ್ಚಾಟ, ಪೊಲೀಸರೆದುರು ನಾನು ನುರಿತ ಈಜುಗಾರ ಎಂದು ಹೇಳಿಕೆ

ಶಿವಮೊಗ್ಗ: ತುಂಬಿ ಹರಿತ್ತಿರುವ ತುಂಗಾ ನದಿಗೆ ಹಾರಿಗೆ ಯುವಕನೊಬ್ಬ ಹುಚ್ಚಾಟ ನಡೆಸಿದ್ದಾನೆ. ಸೇತುವೆ ಮೇಲಿಂದ ಹಾರಿದ ಯುವಕ ಈಜಿಕೊಂಡು ದಡ ಸೇರಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಿವಮೊಗ್ಗ ನಗರದ ಹೊಳೆ ಸೇತುವೆ ನಿಲ್ದಾಣದ ಬಳಿ ಇರುವ ಹೊಸ ಸೇತುವೆ ತಡೆಗೋಡೆ ಮೇಲಿನಿಂದ ಯುವಕ ನದಿಗೆ ಹಾರಿದ್ದಾನೆ. ಸ್ವಲ್ಪ ಹೊತ್ತು ತುಂಬಿ ಹರಿದ ನದಿಯಲ್ಲಿ ಈಜಿ ದಡ ಸೇರಿದ್ದಾನೆ. ರಭಸವಾಗಿ ನೀರು ಹರಿಯುತ್ತಿದ್ದು, ಯುವಕನ ಹುಚ್ಚಾಟ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೋಟೆ ಠಾಣೆ ಪೊಲೀಸರು ವಿಡಿಯೋದಲ್ಲಿನ ಯುವಕನನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಯುವಕನ ಹೆಸರು ಗಂಗಪ್ಪ ಎಂದು ಗೊತ್ತಾಗಿದೆ. ರಾಜೀವ್ ಗಾಂಧಿ ಬಡಾವಣೆ ನಿವಾಸಿ ಗಂಗಪ್ಪ ತಾನು ನುರಿತ ಈಜುಗಾರ ಎಂದು ಹೇಳಿದ್ದಾನೆ.

ಆದರೆ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಗ ಈಜಾಡುವುದು, ಪ್ರಾಣಕ್ಕೆ ಅಪಾಯಕಾರಿ ಎಂದು ತಿಳಿದಿದ್ದರೂ ಸಹಾ, ನದಿಗೆ ಹಾರಿ ಈಜಾಡಿ ನಿರ್ಲಕ್ಷತನ ತೋರಿರುತ್ತಾನೆ. ಆದ್ದರಿಂದ ಯುವಕನ ವಿರುದ್ಧ ಲಘು ಪ್ರಕರಣ ದಾಖಲಿಸಿ, ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular