ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿರುವ ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕತ್ವ ಹೊಂದಿರೋದು ಎಲ್ಲರಿಗೂ ತಿಳಿದಿರೋ ವಿಚಾರ. ಈ ಕಂಪನಿಯು ಸದ್ಯ 17.69 ಟ್ರಿಲಿಯನ್ ಮಾರುಕಟ್ಟೆ ಕ್ಯಾಪ್ ಹೊಂದಿದೆ. ಪ್ರಪಂಚದ ಪ್ರಸಿದ್ಧ ಕೋಟ್ಯಾಧಿಪತಿಗಳಲ್ಲಿ ಮುಕೇಶ್ ಅಂಬಾನಿ ಸಹ ಒಬ್ಬರು.
ಆಕಾಶ್ ಅಂಬಾನಿ, ಅನಂತ್ ಅಂಬಾನಿ, ಶ್ಲೋಕಾ ಮೆಹ್ತಾ ಅಂಬಾನಿ, ಇಶಾ ಅಂಬಾನಿ ಸೇರಿದಂತೆ ಇನ್ನೂ ಅನೇಕರನ್ನು ಹೊಂದಿರುವ ಅಂಬಾನಿ ಕುಟುಂಬವು ತಮ್ಮ ಐಷಾರಾಮಿ ಜೀವನದ ಮೂಲಕವೇ ಆಗಾಗ ಸುದ್ದಿಯಲ್ಲಿ ಇರುತ್ತೆ.
ಅಂಬಾನಿ ಕುಟುಂಬಸ್ಥರು ಬೃಹತ್ ಎಸ್ಯುವಿ ಹಾಗೂ ದುಬಾರಿ ಕಾರುಗಳಲ್ಲಿ ಪ್ರಯಾಣಿಸೋದು ಎಲ್ಲರಿಗೂ ತಿಳಿದಿರುವ ವಿಚಾರ. ಮುಖೇಶ್ ಅಂಬಾನಿ ಮರ್ಸಿಡೀಸ್ ಬೆಂಜ್ 5600 ಗಾರ್ಡ್ ಬುಲೆಟ್ ಪ್ರೂಫ್ ಸೆಡಾನ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇದು 10 ಕೋಟಿ ರೂಪಾಯಿಗಿಂತಲೂ ಹೆಚ್ಚು ಮೌಲ್ಯವನ್ನು ಹೊಂದಿತ್ತು. ಇದೀಗ ಮುಕೇಶ್ ಅಂಬಾನಿ ತಮ್ಮ ಕಾರನ್ನು ಬದಲಾಯಿಸಿದ್ದಾರೆ.
ಮುಕೇಶ್ ಅಂಬಾನಿ ಇದೀಗ Mercedes-Benz S680 ಗಾರ್ಡ್ ಐಷಾರಾಮಿ ಸೆಡಾನ್ ಕಾರನ್ನು ಹೊಂದಿದ್ದಾರೆ. ಈ ಬುಲೆಟ್ ಪ್ರೂಫ್ ಕಾರು ಹೊರಗಿನಿಂದ Mercedes-Benz S-ಕ್ಲಾಸ್ನಂತೆ ಕಾಣುತ್ತದೆ. ಇದು ಸಾಮಾನ್ಯ ಸೆಡಾನ್ಗಿಂತ 2 ಟನ್ಗಳಷ್ಟು ಹೆಚ್ಚು ಭಾರವನ್ನು ಹೊಂದಿದೆ. ಇದು ಬುಲೆಟ್ ಪ್ರೂಫ್ ಹಾಗೂ ಬ್ಲಾಸ್ಟ್ ಪ್ರೂಫ್ ಆಗಿದೆ.
ಈ ದುಬಾರಿ ಕಾರಿನಲ್ಲಿ ಬಲವರ್ಧಿತ ಟೈರ್ಗಳನ್ನು ಕಾಣಬಹುದಾಗಿದೆ. ಇದು 6.0 ಲೀಟರ್ ವಿ 12 ಎಂಜಿನ್ ಚಾಲಿತವಾಗಿದ್ದು 612 Ps ಮತ್ತು 830 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮುಕೇಶ್ ಅಂಬಾನಿ ಕುಟುಂಬದ ಬೆಂಗಾವಲು ಪಡೆಯ ರೋಲ್ಸ್ರಾಯ್ಸ್ ಕಲ್ಲಿನನ್ ಎಎಸ್ಯುವಿ, ಲಂಬೋರ್ಗಿನಿ ಉರಸ್, ಮರ್ಸಿಡಿಸ್ ಎಎಂಜಿ ಜಿ 63, ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ, ಮರ್ಸಿಡೀಸ್ ಮೇಬ್ಯಾಕ್ ಎಸ್ 580 ಸೇರಿದಂತೆ ಇನ್ನು ಅನೇಕ ದುಬಾರಿ ಕಾರುಗಳನ್ನು ಹೊಂದಿದೆ.