HomeKarnatakaBIG NEWS: ಶಾಸಕರು ದೂರು ಕೊಟ್ಟಿಲ್ಲ, ಆದರೆ ಸಭೆ ಕರೆಯಿರಿ ಎಂದಿದ್ದಾರೆ; ಸಿಎಂ ಸ್ಪಷ್ಟನೆ

BIG NEWS: ಶಾಸಕರು ದೂರು ಕೊಟ್ಟಿಲ್ಲ, ಆದರೆ ಸಭೆ ಕರೆಯಿರಿ ಎಂದಿದ್ದಾರೆ; ಸಿಎಂ ಸ್ಪಷ್ಟನೆ

ಹುಬ್ಬಳ್ಳಿ: ಸಚಿವರುಗಳ ವಿರುದ್ಧ ಅಸಮಾಧಾನಗೊಂಡಿರುವ ಹಲವು ಶಾಸಕರು ಪತ್ರ ಬರೆದು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಶಾಸಕರು ಪತ್ರ ಬರೆದು ಯಾವುದೇ ದೂರು ನೀಡಿಲ್ಲ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಾಸಕರು ದೂರು ನೀಡಿಲ್ಲ, ಶಾಸಕಾಂಗ ಸಭೆ ಕರೆಯುವಂತೆ ಹೇಳಿದ್ದಾರೆ. ಹೀಗಾಗಿ ಜುಲೈ 27ರಂದು ಸಭೆ ಕರೆಯಲಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ವಾರ ಸಭೆ ನಡೆಸಬೇಕಿತ್ತು. ಆದರೆ ರಾಹುಲ್ ಗಾಂಧಿ ಬರುತ್ತಿದ್ದ ಕಾರಣ ಶಾಸಕಾಂಗ ಸಭೆ ಕರೆದಿರಲಿಲ್ಲ. ಈಗ ಗುರುವಾರ ಸಭೆ ಕರೆಯಲಾಗಿದೆ ಎಂದರು. ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳೂ ಆಗಿಲ್ಲ. ಹೀಗಿರುವಾಗ ಅಸಮಾಧಾನ ಹೇಗೆ ಸಾಧ್ಯ. ಯಾವ ಅಸಮಾಧಾನವೂ ಇಲ್ಲ, ಯಾರೂ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular