HomeKarnatakaBIG NEWS: ಬಿ.ಕೆ.ಹರಿಪ್ರಸಾದ್ ಸಿಎಂ ಇಳಿಸುವ ಮಾತಾಡ್ತಿದ್ದಾರೆ, ಡಿಸಿಎಂ ಸಿಂಗಾಪುರ ಆಪರೇಷನ್ ಅಂತಿದ್ದಾರೆ; ಸಿದ್ದರಾಮಯ್ಯ ಸರ್ಕಾರ...

BIG NEWS: ಬಿ.ಕೆ.ಹರಿಪ್ರಸಾದ್ ಸಿಎಂ ಇಳಿಸುವ ಮಾತಾಡ್ತಿದ್ದಾರೆ, ಡಿಸಿಎಂ ಸಿಂಗಾಪುರ ಆಪರೇಷನ್ ಅಂತಿದ್ದಾರೆ; ಸಿದ್ದರಾಮಯ್ಯ ಸರ್ಕಾರ 2 ತಿಂಗಳಲ್ಲೇ ಕುಸಿಯುವ ಹಂತ ತಲುಪಿದೆ; ಕೋಟಾ ಶ್ರೀನಿವಾಸ್ ಪೂಜಾರಿ ವ್ಯಂಗ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರ ಕೇವಲ 2 ತಿಂಗಳಲ್ಲಿ ಕುಸಿಯುವ ಹಂತ ತಲುಪಿದೆ ಎಂದು ಬಿಜೆಪಿ ಎಂ ಎಲ್ ಸಿ ಕೋಟಾ ಶ್ರೀನಿವಾಸ್ ಪೂಜಾರಿ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಟಾ ಶ್ರೀನಿವಾಸ್ ಪೂಜಾರಿ, ಒಂದು ಕಡೆ ಬರ, ಇನ್ನೊಂದು ಕಡೆ ಪ್ರವಾಹದ ಸ್ಥಿತಿಯಿದೆ. ಮತ್ತೊಂದೆಡೆ ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿದ್ದಾರೆ. ಕಾನೂನು ಸುವ್ಯವಸ್ಥೆಯಂತೂ ಸಂಪೂರ್ಣವಾಗಿ ಹದಗೆಟ್ಟಿದೆ. ಸರ್ಕಾರ ಕುಸಿದು ಹೋಗಿದೆ ಎಂದು ಕಿಡಿ ಕಾರಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಂ ಎಲ್ ಸಿ ಬಿ.ಕೆ.ಹರಿಪ್ರಸಾದ್ ಸಿಎಂ ಇಳಿಸುವ ಮಾತಾಡ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸಿಂಗಾಪುರ ಆಪರೇಷನ್ ಎನ್ನುತ್ತಿದ್ದಾರೆ. ಸರ್ಕಾರದ ವೈಫಲ್ಯ ಮರೆಮಾಚಲು ವಿಪಕ್ಷಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಚಿವರ ವಿರುದ್ಧ ಶಾಸಕರು ದೂರು ನೀಡಿದ್ದಾರೆ. ಈ ಸರ್ಕಾರದಲ್ಲಿ ಏನಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದರು.

For Latest News Updates, Join Our Whatsapp Community🚩
RELATED ARTICLES

Most Popular