HomeKarnatakaಖಾತೆಗೆ ಅಕ್ಕಿ ಹಣ ಬಂದಿದೆ ಎಂದು ಬ್ಯಾಂಕ್ ಗೆ ಹೋದ ಗ್ರಾಹಕರಿಗೆ ಬಿಗ್ ಶಾಕ್: ಗ್ರಾಹಕರ...

ಖಾತೆಗೆ ಅಕ್ಕಿ ಹಣ ಬಂದಿದೆ ಎಂದು ಬ್ಯಾಂಕ್ ಗೆ ಹೋದ ಗ್ರಾಹಕರಿಗೆ ಬಿಗ್ ಶಾಕ್: ಗ್ರಾಹಕರ ಖಾತೆಗಳಲ್ಲಿದ್ದ ಹಣವನ್ನೇ ದೋಚಿದ ಬ್ಯಾಂಕ್ ಮ್ಯಾನೇಜರ್

ಬೆಂಗಳೂರು: ಗ್ರಾಹಕರ ಖಾತೆಗಳಲ್ಲಿದ್ದ 1.89 ಕೋಟಿ ರೂ. ಬಳಸಿಕೊಂಡ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಗಣೇಶ್ ಬಾಬು ಮತ್ತು ಕಚೇರಿ ಸಹಾಯಕ ಜಿತೇಂದ್ರ ಅವರ ವಿರುದ್ಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜೂನ್ 3ರಿಂದ ಜುಲೈ 17ರ ಅವಧಿಯಲ್ಲಿ ಇವರಿಬ್ಬರೂ ಸೇರಿ ಗ್ರಾಹಕರ ಖಾತೆಗಳಿಂದ ಆರ್‌ಟಿಜಿಎಸ್ ಮೂಲಕ ಹಂತ ಹಂತವಾಗಿ ಕೆಲವು ಖಾತೆಗಳಿಗೆ 1.89 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಗುಜರಾತ್ ಮೂಲದ ಆನ್ಲೈನ್ ಜೂಜು ಮತ್ತು ಕಾಸಿನೋಗಳಿಗೆ ಈ ಹಣ ಬಳಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಿಗೆ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ವರ್ಗಾವಣೆ ಮಾಡಲಾಗಿದೆ. ಖಾತೆಗಳಲ್ಲಿ ಹಣ ಜಮಾ ಆಗಿರುವ ಬಗ್ಗೆ ಗ್ರಾಹಕರು 3-4 ದಿನಗಳ ಹಿಂದೆ ಬ್ಯಾಂಕಿಗೆ ಬಂದು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ತಮ್ಮ ಖಾತೆಗಳಲ್ಲಿ ಹಣ ಇಲ್ಲದಿರುವುದು ಗೊತ್ತಾಗಿದೆ. ಅದಕ್ಕಿಂತ ಮೊದಲೇ ಬ್ಯಾಂಕ್ ವ್ಯವಸ್ಥಾಪಕ ಮತ್ತು ಕಚೇರಿ ಸಹಾಯಕ ಕೆಲಸಕ್ಕೆ ಬಾರದೆ ತಲೆಮರೆಸಿಕೊಂಡಿದ್ದಾರೆ. ಬ್ಯಾಂಕ್ ಮುಂದೆ ಗ್ರಾಹಕರು ಪ್ರತಿಭಟನೆ ನಡೆಸಿ ಚನ್ನರಾಯಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಇವರಿಬ್ಬರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ನಾಪತ್ತೆಯಾಗಿರುವ ಅವರ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular