HomeCrimeBIG NEWS: ಪ್ರೀತಿಸಿ ಕೈಕೊಟ್ಟ ಯುವಕ; ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ; ಯುವಕನ ಕುಟುಂಬದ...

BIG NEWS: ಪ್ರೀತಿಸಿ ಕೈಕೊಟ್ಟ ಯುವಕ; ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ; ಯುವಕನ ಕುಟುಂಬದ ವಿರುದ್ಧ FIR ದಾಖಲು

ಮೈಸೂರು: ಪ್ರೀತಿಸಿದ ಯುವಕ ನಂಬಿಸಿ ಕೈಕೊಟ್ಟ ಕಾರಣಕ್ಕೆ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಕೆ.ಆರ್. ನಗರದ ಗೌಡನಹಳ್ಳಿಯಲ್ಲಿ ನಡೆದಿದೆ.

ನಿಸರ್ಗಾ ಮೃತ ಯುವತಿ. ಕೆ.ಆರ್. ನಗರ ಪ್ರಥಮದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ಓದುತ್ತಿದ್ದ ನಿಸರ್ಗಾಳಿಗೆ, ಸುಹಾಸ್ ರೆಡ್ಡಿ ಎಂಬ ಯುವಕನ ಪರಿಚಯವಾಗಿ, ಪ್ರೀತಿಗೆ ತಿರುಗಿದೆ. ಆದರೆ ಇತ್ತೀಚೆಗೆ ಸುಹಾಸ್ ರೆಡ್ಡಿ ಬೇರೊಂದು ಯುವತಿಯ ಹಿಂದೆ ಬಿದ್ದಿದ್ದನಂತೆ. ಈ ಬಗ್ಗೆ ನಿಸರ್ಗಾ ಸುಹಾನ್ ಮನೆಯವರಿಗೆ ತಿಳಿಸಿದ್ದಳಂತೆ ಆದರೆ ಸುಹಾನ್ ಕುಟುಂಬದವರು ನಿಸರ್ಗಾಳಿಗೆ ಬೈದಿದ್ದಲ್ಲದೇ, ಕೆಟ್ಟದಾಗಿ ನಿಂದಿಸಿದ್ದರಂತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ಮನನೊಂದ ನಿಸರ್ಗಾ, ಡೆತ್ ನೋಟ್ ಬರೆದಿಟ್ಟು ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.

ಕೆ.ಆರ್. ನಗರ ಠಾಣೆಯಲ್ಲಿ ಸುಹಾಸ್ ರೆಡ್ಡಿ, ಆತನ ಇತ್ತೀಚಿನ ಪ್ರಿಯತಮೆ ಹಾಗು ಸುಹಾಸ್ ಕುಟುಬದವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಸುಹಾಸ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular