
ಮೃತ ಯುವಕನನ್ನು ಸೆಕ್ಟರ್ 19ರ ನಿವಾಸಿ ಸಕ್ಷಮ್ ಪೃಥಿ ಎಂದು ಗುರುತಿಸಲಾಗಿದೆ. ಸಕ್ಷಮ್ ಬಿಟೆಕ್ ಪದವಿಧರರಾಗಿದ್ದರು. ಅಲ್ಲದೇ ಕಂಪನಿಯೊಂದರಲ್ಲಿ ಕೆಲಸ ಕೂಡ ಮಾಡುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸೆಕ್ಟರ್ 15ರಲ್ಲಿರುವ ಜಿಂಪ್ಲೆಕ್ಸ್ ಫಿಟ್ನೆಸ್ ಝೋನ್ ಎಂಬ ಜಿಮ್ನಲ್ಲಿ ಸಕ್ಷಮ್ ದೇಹ ದಂಡನೆ ಮಾಡುತ್ತಿದ್ದರು. ಬೆಳಗ್ಗೆ 7:30ರ ಸುಮಾರಿಗೆ ಟ್ರೆಡ್ಮಿಲ್ ಮೇಲೆ ವಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಸಕ್ಷಮ್ಗೆ ಕರೆಂಟ್ ಶಾಕ್ ಹೊಡೆದಿದೆ.
ಮರಣೋತ್ತರ ಪರೀಕ್ಷಾ ವರದಿಯಲ್ಲಿಯೂ ಸಕ್ಷಮ್ ವಿದ್ಯುತ್ ಅವಘಡದಿಂದ ಸಾವನ್ನಪ್ಪಿರೋದು ದೃಢಪಟ್ಟಿದೆ. ಈ ಪ್ರಕರಣ ಸಂಬಂಧ ಜಿಮ್ ಮ್ಯಾನೇಜರ್ ಅನುಭವ್ ದುಗ್ಗಲ್ರನ್ನು ಬಂಧಿಸಲಾಗಿದೆ.

