HomeCrimeಉದ್ಯಮಿಯನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿಸಲು ಕೋಳಿ ರಕ್ತ ಬಳಸಿದ ಯುವತಿ..!

ಉದ್ಯಮಿಯನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿಸಲು ಕೋಳಿ ರಕ್ತ ಬಳಸಿದ ಯುವತಿ..!

ಯುವತಿಯೊಬ್ಬಳು ಕೋಳಿ ರಕ್ತವನ್ನು ಬಳಸಿ 64 ವರ್ಷದ ಉದ್ಯಮಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊರಿಸಿದ್ದು ಮಾತ್ರವಲ್ಲದೇ ಅವರಿಂದ ಬರೋಬ್ಬರಿ 3.26 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾರೆ ಎಂದು 2021ರಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ದೋಷಾರೋಪ ಪಟ್ಟಿಯಲ್ಲಿ ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೋನಿಕಾ ಭಗವಾನ್​ ಅಲಿಯಾಸ್​ ದೇವ್​ ಚೌಧರಿ ಹಾಗೂ ಆಕೆಯ ಸಹಚರರಾದ ಅನಿಲ್​ ಚೌಧರಿ ಅಲಿಯಾಸ್​ ಆಕಾಶ, ಫ್ಯಾಷನ್ ಡಿಸೈನರ್ ಲುಬ್ನಾ ವಜೀರ್ ಅಲಿಯಾಸ್ ಸಪ್ನಾ ಮತ್ತು ಆಭರಣ ವ್ಯಾಪಾರಿ ಮನೀಶ್ ಸೋಡಿ ವಿರುದ್ಧ ಕಳೆದ ವಾರ ದೂರು ದಾಖಲಾಗಿತ್ತು.

2021 ರಲ್ಲಿ, ಮಹಾರಾಷ್ಟ್ರದ ಕೊಲ್ಲಾಪುರದ ಉದ್ಯಮಿಯೊಬ್ಬರು ಸಹರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು, ಮೋನಿಕಾ ಮತ್ತು ಆಕೆಯ ಸಹಚರರು ತನ್ನನ್ನು ಬಲೆಗೆ ಬೀಳಿಸಿ 3.26 ಕೋಟಿ ರೂ ಸುಲಿಗೆ ಮಾಡಿದ್ದಾರೆ ಎಂದು ದೂರಿದ್ದರು. ಉದ್ಯಮಿಯ ವಿಡಿಯೋವೊಂದನ್ನು ರೆಕಾರ್ಡ್ ಮಾಡಿ 2019ರಲ್ಲಿ ಉದ್ಯಮಿಯನ್ನು ಬ್ಲಾಕ್​ ಮೇಲ್​ ಮಾಡಿದ್ದರು. ಹಣ ನೀಡದೇ ಹೋದರೆ ಲೈಂಗಿಕ ದೌರ್ಜನ್ಯದ ಕೇಸ್​ ದಾಖಲಿಸೋದಾಗಿ ಹೇಳಿದ್ದರು. ಇದೇ ವಿಡಿಯೋ ಬಳಸಿಕೊಂಡು ಕಳೆದ 2 ವರ್ಷಗಳಿಂದ 3.26 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

64 ವರ್ಷದ ಉದ್ಯಮಿ 2016 ರಲ್ಲಿ ಗೋವಾದಲ್ಲಿ ಅನಿಲ್ ಚೌಧರಿ ಅವರನ್ನು ಭೇಟಿಯಾದರು, ಅಲ್ಲಿ ಅವರು ಪರಸ್ಪರ ಮೊಬೈಲ್​ ನಂಬರ್​​ ವಿನಿಮಯ ಮಾಡಿಕೊಂಡರು. 2018 ರಲ್ಲಿ ಅನಿಲ್ ಅವರನ್ನು ಫ್ಯಾಶನ್ ಡಿಸೈನರ್ ಲುಬ್ನಾ ವಜೀರ್ ರಿಗೆ ಪರಿಚಯಿಸಿದರು. ಮಾರ್ಚ್ 2019 ರಲ್ಲಿ, ಉದ್ಯಮಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದರು, ಸಪ್ನಾ ಮತ್ತು ಮೋನಿಕಾ ಅವರೊಂದಿಗೆ ಭೋಜನಕ್ಕೆ ಸೇರಬಹುದೇ ಎಂದು ಚೌಧರಿ ಅವರನ್ನು ಕೇಳಿದಾಗ ಅವರು ಒಪ್ಪಿದರು. ಸಪ್ನಾ ಮತ್ತು ಮೋನಿಕಾ ಹೋಟೆಲ್ ತಲುಪಿ ದೂರುದಾರರನ್ನು ಅವರ ಕೋಣೆಯಲ್ಲಿ ಭೇಟಿಯಾದರು.

ಸ್ವಲ್ಪ ಸಮಯದ ನಂತರ, ಸಪ್ನಾ ಕೆಲವು ದಾಖಲೆಗಳನ್ನು ಹೋಟೆಲ್‌ನ ಲಾಬಿಯಲ್ಲಿ ಯಾರಿಗೋ ಹಸ್ತಾಂತರಿಸಬೇಕೆಂದು ಹೇಳಿಕೊಂಡು ಹೋಟೆಲ್​ ರೂಂನಿಂದ ಹೊರಬಂದರು. ಅದೇ ಸಮಯಕ್ಕೆ ಮೋನಿಕಾ ಹೋಟೆಲ್ ರೂಮಿನ ವಾಶ್ ರೂಮ್ ಒಳಗೆ ಹೋದಳು. ಸ್ವಲ್ಪ ಸಮಯದ ನಂತರ, ಯಾರೋ ಕೋಣೆಯ ಡೋರ್‌ಬೆಲ್ ಅನ್ನು ಬಾರಿಸಿದ್ದು, ಉದ್ಯಮಿ ಬಾಗಿಲು ತೆರೆದಾಗ, ಸಪ್ನಾ ಕೂಗಲು ಮತ್ತು ತನ್ನ ಫೋನ್‌ನಲ್ಲಿ ವೀಡಿಯೊ ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದಾಳೆ.

ತನ್ನನ್ನು ವಿವಸ್ತ್ರಗೊಳಿಸಿ ಬೆಡ್‌ಶೀಟ್‌ನಿಂದ ಮುಚ್ಚಿಕೊಂಡಿದ್ದ ಮೋನಿಕಾ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾಳೆ. ಮೋನಿಕಾ ಅವರ ಬಟ್ಟೆಗಳು ಮತ್ತು ಅವಳು ತನ್ನನ್ನು ಮುಚ್ಚಿಕೊಳ್ಳಲು ಬಳಸುತ್ತಿದ್ದ ಬೆಡ್‌ಶೀಟ್‌ನಲ್ಲಿ ರಕ್ತದ ಕಲೆಗಳಿದ್ದವು, ಅದು ಲೈಂಗಿಕ ದೌರ್ಜನ್ಯದ ಪರಿಣಾಮವಾಗಿದೆ ಎಂದು ಅವರು ಹೇಳಿದ್ದರು.

ಇದರಿಂದ ಗಾಬರಿಗೊಂಡ ಉದ್ಯಮಿ ಅನಿಲ್‌ಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದರು. ಬಳಿಕ ಅನಿಲ್ ಆಗಮಿಸಿದ್ದು, 10 ಕೋಟಿ ರೂಪಾಯಿ ಮೊತ್ತವನ್ನು ನೀಡದಿದ್ದರೆ ಆತನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿ ಬೆದರಿಸಿದ್ದರು.
ಅಂತಿಮವಾಗಿ, ಅವರು 75 ಲಕ್ಷಕ್ಕೆ ಡೀಲ್​ ಕುದುರಿಸಿದರು. ಆದರೆ ಅಂದಿನಿಂದ, ಉದ್ಯಮಿಯಿಂದ ಎರಡು ವರ್ಷಗಳ ಅವಧಿಯಲ್ಲಿ 3.26 ಕೋಟಿ ರೂ. ವಸೂಲಿ ಮಾಡಿದ್ದಾರೆ ಎಂದು ದೂರಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular