ಬೆಂಗಳೂರು : ವಿಧಾನಸಭೆಯಲ್ಲಿ ‘ಭೂ ಕಂದಾಯ ತಿದ್ದುಪಡಿ’ ಸೇರಿ ಹಲವು ವಿಧೇಯಕಗಳ ಮಂಡನೆಯಾಗಿದೆ.
ಸಿವಿಲ್ ಪ್ರಕ್ರಿಯಾ ಸಂಹಿತೆ ತಿದ್ದುಪಡಿ ವಿಧೇಯಕ, ಭೂ ಕಂದಾಯ ತಿದ್ದುಪಡಿ ವಿಧೇಯಕ, ಸರ್ಕಾರಿ ವ್ಯಾಜ್ಯ ನಿರ್ವಹಣಾ ವಿಧೇಯಕ, ನೋಂದಣಿ ಕರ್ನಾಟಕ ತಿದ್ದುಪಡಿ ವಿಧೇಯಕ ಮತ್ತು ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಮಂಡನೆಯಾಗಿದೆ.
ಹಾಗೆಯೇ ವಿಧಾನಸಭೆಯಲ್ಲಿ ಇಂದು ಸರಕು, ಸೇವೆಗಳ ತೆರಿಗೆ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ.ವಿಧಾನ ಪರಿಷತ್ ನಲ್ಲಿ ಕರ್ನಾಟಕ ಸರಕು, ಸೇವೆಗಳ ತೆರಿಗೆ ತಿದ್ದುಪಡಿ ಮಸೂದೆ ಅಂಗೀಕಾರ ಮಾಡಲಾಗಿದೆ. ಹಾಗೂ ಕರ್ನಾಟಕ ವಿಧಾನಮಂಡಲ ಅನರ್ಹತಾ ನಿವಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರಮಾಡಲಾಯಿತು.ಹಾಗೂ ಕರ್ನಾಟಕ ವಿಧಾನಮಂಡಲ ಅನರ್ಹತಾ ನಿವಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರ ಪಡೆಯಿತು.. ಮುಂದಿನ ದಿನಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ತರುತ್ತೇವೆ. ಸರಿಯಾಗಿ ಟ್ಯಾಕ್ಸ್ ಕಲೆಕ್ಟ್ ಆಗಬೇಕು ಎಂದು ಸಚಿವ ಹೆಚ್ ಕೆ ಪಾಟೀಲ್ ಸದನದಲ್ಲಿ ಹೇಳಿದರು.
ಸರ್ಕಾರದ ತಪ್ಪನ್ನು ಎತ್ತಿ ಹಿಡಿದರೆ ಅದನ್ನು ಪ್ರಚಾರಕ್ಕೆ ಅಂದ್ರೆ ಏನು ಹೇಳೋದು…..? ಡಿ.ಕೆ.ಶಿಗೆ ಖಾರವಾಗಿ ಉತ್ತರಿಸಿದ HDK
ವಿಪಕ್ಷಗಳ ಮಹಾ ಮೈತ್ರಿ ಕೂಟ ಸಭೆಗೆ ರಾಜ್ಯದ ಐಎಎಸ್ ಅಧಿಕಾರಿಗಳನ್ನು ಬಳಸಿಕೊಳ್ಳುವ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಮಾಜಿ ಸಿಎಂ ಕುಮರಸ್ವಾಮಿ ಆರೋಪಕ್ಕೆ, ಕುಮಾರಸ್ವಾಮಿಯವರಿಗೂ ಪ್ರಚಾರ ಬೇಕಲ್ವಾ? ಹಾಗಾಗಿ ಮಾತಾಡ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರು. ಡಿ.ಕೆ. ಶಿವಕುಮಾರ್ ಹೇಳಿಕೆಗೆ ಇದೀಗ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಸಿಕ್ಕಿಂ ನಲ್ಲಿ ನಿಗದಿಯಾಗಿದ್ದ ಸಭೆ ಇಲ್ಲಿನ ಯಾಕೆ ನಡೆಯುತ್ತಿದೆ? ಇವರ ಪ್ರಚಾರಕ್ಕಾಗಿ ಸಭೆಯನ್ನು ಇಲ್ಲಿಗೆ ಶಿಫ್ಟ್ ಮಾಡಿದ್ದಾರೆ. ಅಂದಮೇಲೆ ಪ್ರಚಾರಕ್ಕಾಗಿ ಮಾಡುತ್ತಿರುವವರು ಯಾರು? ಇನ್ನು ಈ ರೀತಿ ರಾಜಕೀಯ ಸಭೆಗಳು ಹಲವು ನಡೆದಿವೆ. ಆದರೆ ಯಾವ ಸರ್ಕಾರವೂ ಐ ಎ ಎಸ್ ಅಧಿಕಾರಿಗಳನ್ನು ಹೀಗೆ ಬಳಸಿಕೊಂಡಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕೂಡ ಸಭೆ ಮಾಡಿದ್ದರು. ನನಗೂ ಆಹ್ವಾನ ನೀಡಿದ್ದರು ಹೀಗೆ ಮಾಡಿರಲಿಲ್ಲ. ಆದರೆ ರಾಜ್ಯ ಸರ್ಕಾರ ಸ್ವೇಚ್ಛಾಚಾರದಿಂದ ನಿಯಮ ಉಲ್ಲಂಘನೆ ಮಾಡಿ ಅಧಿಕಾರಿಗಳನ್ನು ಸಭೆಗೆ ನೇಮಕ ಮಾಡಿದೆ. ಮುಖ್ಯಮಂ