ಮೂವರು ಮಕ್ಕಳ ಮೇಲೆ ವೇಗವಾಗಿ ಬಂದ ಚಾಲಕ ಕಾರು ಹತ್ತಿಸಿದ ಘಟನೆಯ ಆಘಾತಕಾರಿ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಗುರುವಾರದಂದು ಈ ಘಟನೆ ಸಂಭವಿಸಿದೆ. ಆರೋಪಿ ಗೋವಿಂದ್ ಯಾವದ್ ಮೂವರು ಮಕ್ಕಳನ್ನು ಕೊಲ್ಲಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.
ಕೋಟ್ವಾಲಿಯ ಸಿಂಧರ್ವಾ ಗ್ರಾಮದ ಕಾಜಿ ಖೇಡಾ ಗ್ರಾಮದ ಈ ಮಕ್ಕಳ ತಂದೆ ವೀರೇಂದ್ರ ಅಲಿಯಾಸ್ ಸೀತಾರಾಮ್ ಎಂಬವರೊಂದಿಗೆ ಗೋವಿಂದ ಯಾದವ್ ದ್ವೇಷ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಇದೇ ದ್ವೇಷದಲ್ಲಿ ಮಕ್ಕಳ ಮೇಲೆ ಕಾರು ಹತ್ತಿಸಿದ್ದಾನೆ. ಗಾಯಗೊಂಡಿರುವ ಮೂವರು ಮಕ್ಕಳು ಅಪ್ತಾಪ್ತರಾಗಿದ್ದು, ಶಿವಾನಿ (8), ಸ್ನೇಹ (4) ಮತ್ತು ಕಿರಿಯ ಕೃಷ್ಣ (3) ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೆಡಾನ್ ಕಾರು ಸೀದಾ ಮಕ್ಕಳ ಮೇಲೆ ಹರಿದಿದೆ. ಗಾಬರಿಗೊಂಡ ಮಕ್ಕಳು ಕಾರಿನಡಿಗೆ ಬಿದ್ದಿದ್ದಾರೆ. ಈ ಭೀಕರ ದೃಶ್ಯವು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲೇ ಇದ್ದ ಸಾರ್ವಜನಿಕರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೋವಿಂದ ಸ್ಥಳದಿಂದ ಕಾಲ್ಕೀಳಲು ಯತ್ನಿಸಿದ್ದು ಆತನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
तीन मासूम बच्चों पर चढ़ाई कार
आरोपी ने तीनों की हत्या करने की कोशिश
पिता से पुरानी रंजिश में आरोपी गोविंद यादव ने तीनों बच्चों को मारी टक्कर
8 वर्षीय शिवानी, 5 वर्षीय स्नेहा और मासूम कृष्णा गंभीर रूप से घायल
पुलिस ने आरोपी गोविंद यादव को किया गिरफ्तार
मलिहाबाद के… pic.twitter.com/djO5Rwjh9w
— Knews (@Knewsindia) July 18, 2023

