2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವಿಭಾಗೀಯ ಮಟ್ಟದ ಕೋರಿಕೆ ವರ್ಗಾವಣೆ ಕೌನ್ಸಲಿಂಗ್ ಆನ್‍ಲೈನ್ ಮೂಲಕ ನಡೆಸಲು ಪರಿಷ್ಕøತ ವರ್ಗಾವಣೆ ವೇಳಾ ಪಟ್ಟಿ ಪ್ರಕಟಿಸಲಾಗಿದೆ.
ಬೆಂಗಳೂರು ವಿಭಾಗ ಮಟ್ಟದ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಹಾಗೂ ಅಂತಿಮ ಪಟ್ಟಿಯಲ್ಲಿರುವ ಶಿಕ್ಷಕರ ಕೌನ್ಸಲಿಂಗ್‍ನ್ನು ಇದೇ ಜುಲೈ 18 ರಿಂದ ಜುಲೈ 25 ರವರಗೆ ಶಿಕ್ಷಕರ ಸದನ ಕೆಂಪೆಗೌಡ ರಸ್ತೆ, ಬೆಂಗಳೂರಿನಲ್ಲಿ ನಡೆಯಲಿದೆ.
ವೇಳಾಪಟ್ಟಿ : 1 ರಿಂದ 5 ವರೆಗಿನ ಆಧ್ಯತಾ ಸಂಖ್ಯೆಯ ವಿಶೇಷ ಶಿಕ್ಷಕರ, 1 ರಿಂದ 32 ವರೆಗಿನ ದೈಹಿಕ ಶಿಕ್ಷಕರ, 1 ರಿಂದ 36 ವರಿಗಿನ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹಾಗೂ 1 ರಿಂದ 400 ವರೆಗಿನ ಸಹ ಶಿಕ್ಷಕರ ಕೌನ್ಸಲಿಂಗ್ ದಿನಾಂಕ 18-07-2023 ರಂದು ನಡೆಯಲಿದೆ. 19-07-2023 ರಂದು 401 ರಿಂದ 900 ಹಾಗೂ 20-07-2023 ರಂದು 901 ರಿಂದ ಆಧ್ಯತಾ ಸಂಖ್ಯೆ ಮುಕ್ತಾಯವಾಗುವವರೆಗೆ ಸಹ ಶಿಕ್ಷಕರ ಕೌನ್ಸಲಿಂಗ್ ನಡೆಯಲಿದೆ. 25-07-2023 ರಂದು 1 ರಿಂದ 37 ಆಧ್ಯತಾ ಸಂಖ್ಯೆ ವರೆಗೆ ಸಹ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸಲಿಂಗ್ ನಡೆಯಲಿದೆ.
ಬೆಂಗಳೂರು ವಿಭಾಗದೊಳಗಿನ ಪ್ರೌಢ ಶಾಲೆ ವರ್ಗಾವಣೆ ಜುಲೈ 21 ರಿಂದ ಆರಂಭವಾಗಲಿದೆ. ದಿನಾಂಕ 21-07-2023 ರಂದು ಆಧ್ಯತಾ ಕ್ರಮ ಸಂಖ್ಯೆ 1 ರಿಂದ 94 ವರೆಗಿನ ವಿಶೇಷ ಶಿಕ್ಷಕರು, 1 ರಿಂದ 108 ವರೆಗಿನ ದೈಹಿಕ ಶಿಕ್ಷಕರು, 1 ರಿಂದ 200 ವರೆಗೆ ಸಹ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ನಡೆಯಲಿದೆ. 22-07-2023 ರಂದು 201 ರಿಂದ 700, 24-07-2023 ರಂದು 701 ರಿಂದ ಮುಕ್ತಾಯವಾಗುವವರೆಗೂ ಸಹ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ನಡೆಯಲಿದೆ. ದಿನಾಂಕ 25-07-2023 ರಂದು 1 ರಿಂದ 28 ವರೆಗಿನ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸಲಿಂಗ್ ನಡೆಯಲಿದೆ.
ವರ್ಗಾವಣೆ ಅರ್ಜಿ ಸಲ್ಲಿಸಿದ ಶಿಕ್ಷಕರು ತಮ್ಮ ಆಧ್ಯತಾ ಸಂಖ್ಯೆಯ ಅನುಸಾರ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.