HomeKarnatakaರಾಜ್ಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 2ನೇ ಜೊತೆ `ಉಚಿತ ಸಮವಸ್ತ್ರ’ ವಿತರಣೆಗೆ...

ರಾಜ್ಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 2ನೇ ಜೊತೆ `ಉಚಿತ ಸಮವಸ್ತ್ರ’ ವಿತರಣೆಗೆ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು 1-10 ನೇ ತರಗತಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ್ದು, 2ನೇ ಜೊತೆ ಉಚಿತ ಸಮವಸ್ತ್ರ ವಿತರಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2022-23ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 44.79 ಲಕ್ಷ ವಿದ್ಯಾರ್ಥಿಗಳಿಗೆ 2 ನೇಯ ಜೊತೆ  ಸಮವಸ್ತ್ರವನ್ನು ಒಟ್ಟು ರೂ.73.66 ಕೋಟಿ ರೂ. ವೆಚ್ಚದಲ್ಲಿ ನಿಯಮಾನುಸಾರ ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯ ಮೂಲಕ ಖರೀದಿಸಿ ಸರಬರಾಜು ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದರಿ ಅನುದಾನವನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರ ಎಸ್.ಎನ್.ಎ. ಖಾತೆಯಲ್ಲಿ (SNA Account) ಲಭ್ಯವಿರುವ ಅನುದಾನದಿಂದ ಭರಿಸಲು ಕ್ರಮವಹಿಸತಕ್ಕದ್ದು.

ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಸ್ಪರ್ಧಾತ್ಮಕ ಟೆಂಡರ್ ಪುಕ್ರಿಯೆ ಮುಖಾಂತರವಾಗಿ ಹೊರಹೊಮ್ಮಿದ ಕನಿಷ್ಕೃತಮ ದರಗಳಲ್ಲಿ 30 ದಿವಸಗಳ ಸ್ಪರ್ಧಾತ್ಮಕ ಟೆಂಡರ್ ಮೂಲಕ ಖರೀದಿಸಿ, ಸರಬರಾಜು ಮಾಡುವುದು ಹಾಗೂ ಸಮವಸ್ಸದ ಬಟ್ಟೆಯ ಗುಣಮಟ್ಟದಲ್ಲಿ ರಾಜಿಯಾಗದಂತೆ ಎಚ್ಚರವಹಿಸತಕ್ಕದ್ದು. ಸದರಿ ಕಾರ್ಯಕ್ರಮಕ್ಕಾಗಿ ಅನುಮೋದನೆ ನೀಡಲಾಗಿರುವ ಒಟ್ಟು ರೂ.73.65 ಕೋಟಿ ಅನುದಾನ ಒದಗಿಸಲಾಗಿದ್ದು, ಸದರಿ ಅನುದಾನದ ಮಿತಿಯೊಳಗೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಂತೆ ಆದೇಶಿಸಲಾಗಿದೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular