ಸ್ನೇಹಿತನ ಜೊತೆ ಪತ್ನಿ ಎಕ್ಸ್​ಚೇಂಜ್​ ಮಾಡಿದ ಪತಿ : ಪೊಲೀಸ್​ ಠಾಣೆ ಮೆಟ್ಟಿಲೇರಿದ ಹೆಂಡತಿ…!

ಹೌಸ್​ ಪಾರ್ಟಿಯೊಂದರಲ್ಲಿ ಬಲವಂತವಾಗಿ ನನ್ನ ಪತಿ ಹಾಗೂ ಆತನ ಸ್ನೇಹಿತನ ಜೊತೆ ಸೇರಿ ಪತ್ನಿಯರನ್ನು ಅದಲು ಬದಲು ಮಾಡಿಕೊಂಡಿದ್ದಾರೆ. ಅಲ್ಲದೇ ನನಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಸ್ನೇಹಿತನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪೀಡಿಸಿದ್ದಾನೆಂದು ಮಹಿಳೆಯು ತನ್ನ ಪತಿಯ ವಿರುದ್ಧ ದೂರು ನೀಡಿದ್ದಾರೆ. ಈ ಪ್ರಕರಣ ಸಂಬಂಧ ದೂರುದಾರ ಮಹಿಳೆಯ ಪತಿ, ಸ್ನೇಹಿತ ಹಾಗೂ ಆತನ ಪತ್ನಿ ಸೇರಿದಂತೆ ಒಟ್ಟು 9 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್ ಮೂಲದ ಮಹಿಳೆ, ಮುರಾದಾಬಾದ್‌ನ ವ್ಯಕ್ತಿಯನ್ನು ವಿವಾಹವಾಗಿದ್ದರು. ಅವಳು ನೋಯ್ಡಾದ ಸೆಕ್ಟರ್ 137 ರಲ್ಲಿ ತನ್ನ ಅತ್ತೆಯೊಂದಿಗೆ ವಾಸಿಸುತ್ತಿದ್ದಳು.

ಮದುವೆಯಾದಾಗಿನಿಂದಲೂ ಆಧುನಿಕ ಜೀವನ ಶೈಲಿಗೆ ಹೊಂದಿಕೊಳ್ಳುವಂತೆ ಅತ್ತೆಯಂದಿರು ಒತ್ತಡ ಹೇರುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅತ್ತೆಯು ನಾನು ಯಾವ ದಿನಗಳಲ್ಲಿ ಪತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು ಎಂದು ದೂರಿದ್ದಾರೆ.

ಕಳೆದ ವರ್ಷ ಏಪ್ರಿಲ್ 18 ರಂದು, ಪತಿ ತನ್ನನ್ನು ಪಾರ್ಟಿಗಾಗಿ ಸೆಕ್ಟರ್ 75 ರ ಫ್ಲ್ಯಾಟ್‌ಗೆ ಕರೆದೊಯ್ದನು, ಅಲ್ಲಿ ಅವನ ಸ್ನೇಹಿತ ಮತ್ತು ಅವನ ಸ್ನೇಹಿತನ ಹೆಂಡತಿ ಕೂಡ ಇದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ನಂತರ ಬಲವಂತವಾಗಿ ಮದ್ಯ ಸೇವಿಸಿ ತನ್ನ ಸ್ನೇಹಿತನ ಜೊತೆ ಮಲಗುವಂತೆ ಹೇಳಿ ನನ್ನ ಪತಿ ತನ್ನ ಸ್ನೇಹಿತನ ಪತ್ನಿಯೊಂದಿಗೆ ಮಲಗಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದ್ದಕ್ಕೆ ನಿನ್ನಿಂದ ಬೇರಾಗುತ್ತೇನೆ ಎಂದು ಹೆದರಿಸಿದ್ದಾನೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read