HomeKarnatakaಐಷಾರಾಮಿ ಜೀವನಕ್ಕೆ ಮಹಿಳೆಯಂತೆ ವೇಷ : ಜನರಿಂದ ಹಣ ವಸೂಲಿಗೆ ಇಳಿದಿದ್ದ ವ್ಯಕ್ತಿ ಅರೆಸ್ಟ್

ಐಷಾರಾಮಿ ಜೀವನಕ್ಕೆ ಮಹಿಳೆಯಂತೆ ವೇಷ : ಜನರಿಂದ ಹಣ ವಸೂಲಿಗೆ ಇಳಿದಿದ್ದ ವ್ಯಕ್ತಿ ಅರೆಸ್ಟ್

ಬೆಂಗಳೂರು: ಐಷಾರಿಮಿ ಜೀವನಕ್ಕಾಗಿ ವ್ಯಕ್ತಿಯೊಬ್ಬ ಮಹಿಳೆಯಂತೆ ವೇಷ ಧರಿಸಿ, ಜನರಿಂದ ಹಣ ವಸೂಲಿ ಮಾಡುತ್ತಿದ್ದ ವಂಚಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಚೇತನ್ ಬಂಧಿತ ಆರೋಪಿ. ನ್ಯಾಯಯುತವಾಗಿ ದುಡಿದು ಹೆಂಡತಿ, ಮಕ್ಕಳನ್ನು ಸಾಕುವುದನ್ನು ಬಿಟ್ಟು ಆರೋಪಿ ಚೇತನ್ ಮಹಿಳೆಯರಂತೆ ವೇಷ ತೊಟ್ಟು ಜನರಿಂದ ಹಣ ವಸೂಲಿ ಮಾಡುತ್ತಿದ್ದ. ಹಣ ಕೊಡದಿದ್ದಾಗ ಕೊಲೆ ಬೆದರಿಕೆಯೊಡ್ಡುತ್ತಿದ್ದ. ಅಲ್ಲದೇ ಮಂಗಳಮುಖಿಯರ ಸಹವಾಸ ಮಾಡಿದ್ದ ಚೇತನ್ ಮಂಗಳ ಮುಖಿಯರೊಂದಿಗೆ ಭಿಕ್ಷಾಟನೆಯನ್ನೂ ಮಾಡುತ್ತಿದ್ದ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಂಡತಿಗೂ ಹೇಳದೇ ಬೇರೆ ರೂಮ್ ಮಾಡಿದ್ದ ಚೇತನ್ ನಾಗಸಂಧ್ರ ಮೆಟ್ರೋ ನಿಲ್ದಾಣ ಸುತ್ತಮುತ್ತ ಭಿಕ್ಷಾಟನೆ ಮಾಡುತ್ತಿದ್ದ. ಬಿಎಂಆರ್ ಸಿಎಲ್ ಜಾಗದಲ್ಲಿ ಶೆಡ್ ನಿರ್ಮಾಣಕ್ಕೆ ಮುಂದಾಗಿದ್ದ. ಸ್ಥಳೀಯರು ಹಾಗೂ ಅಧಿಕಾರಿಗಳು ಪರಿಶೀಲನೆಗೆ ಮುಂದಾದಾಗ ಮಹಿಳೆಯರ ಸೀರೆ ಎಳೆದು ಹುಚ್ಚಾಟ ನಡೆಸಿದ್ದ. ಈ ವೇಳೆ ಸ್ಥಳೀಯರು ಚೇತನ್ ನನ್ನು ಹಿಡಿದು ಥಳಿಸಿದ್ದಾರೆ. ಚೇತನ್ ಅಸಲಿ ಬಣ್ಣ ತಿಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಗಲಗುಂಟೆ ಪೊಲೀಸರು ಆರೋಪಿ ಚೇತನ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular