ಬೆಂಗಳೂರು : ಮರಾಠಿ ನಟ-ನಿರ್ದೇಶಕ ರವೀಂದ್ರ ಮಹಾಜನಿ ಪುಣೆ ಬಳಿಯ ತಲೇಗಾಂವ್ ದಭಾಡೆ ಪ್ರದೇಶದ ಬಾಡಿಗೆ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 77 ವರ್ಷದ ನಟನ ಶವ ಶುಕ್ರವಾರ ಸಂಜೆ ಪತ್ತೆಯಾಗಿದೆ ಎಂದು ಪೊಲೀಸರು ಶನಿವಾರ ವರದಿ ಮಾಡಿದ್ದಾರೆ.
ಸುಮಾರು ಮೂರು ದಿನಗಳ ಹಿಂದೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.”ಮಹಾಜನಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಫ್ಲ್ಯಾಟ್ ನ ನೆರೆಹೊರೆಯವರಿಂದ ನಮಗೆ ಕರೆ ಬಂದಿದ್ದು, ಅವರ ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ನಮಗೆ ಮಾಹಿತಿ ನೀಡಿದರು.
ನಾವು ಸ್ಥಳಕ್ಕೆ ಹೋಗಿ ಫ್ಲಾಟ್ ನ ಬಾಗಿಲು ಒಡೆದು ನೋಡಿದಾಗ ಅವರು ಶವವಾಗಿ ಪತ್ತೆಯಾಗಿದ್ದಾರೆ” ಎಂದು ತಲೇಗಾಂವ್ ದಭಾಡೆ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಮೂರು ದಿನಗಳ ಹಿಂದೆ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ” ಎಂದು ಅವರು ಹೇಳಿದರು. ಮುಂಬೈನಲ್ಲಿ ಮನೆ ಹೊಂದಿರುವ ಮಹಾಜನಿ ಕಳೆದ ಎಂಟು ತಿಂಗಳಿನಿಂದ ತಲೇಗಾಂವ್ ದಭಾಡೆಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.