alex Certify ಬೆಲೆ ಏರಿಕೆ ನಡುವೆ ವಿಷಕಾರಿಯಾಗುತ್ತಿದೆ ಟೊಮೆಟೊ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಲೆ ಏರಿಕೆ ನಡುವೆ ವಿಷಕಾರಿಯಾಗುತ್ತಿದೆ ಟೊಮೆಟೊ

ಬೆಂಗಳೂರು: ಈಗ ಎಲ್ಲಿ ಹೋದರೂ ಟೊಮೆಟೊದ್ದೇ ಮಾತು. ಟೊಮೆಟೊ ಬೆಲೆ ಏರಿಕೆ ದಿನದಿಂದ ದಿನಕ್ಕೆ ಗ್ರಾಹಕರನ್ನು ಹೈರಾಣಾಗಿಸುತ್ತಿದೆ. ಬೆಲೆ ಏರಿಕೆ ಬಿಸಿ ನಡುವೆ ಟೊಮೆಟೊ ಇದೀಗ ವಿಷಕಾರಿಯೂ ಆಗುತ್ತಿದೆ. ಹೆಚ್ಚು ಲಾಭ ಪಡೆಯುವ ಉದ್ದೇಶಕ್ಕೆ ರೈತರು ಅಗತ್ಯಕ್ಕಿಂತ ಹೆಚ್ಚು ಔಷಧ ಸಿಂಪಡಣೆ ಮಾಡುತ್ತಿದ್ದು, ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಕರಣವಾಗುತ್ತಿದೆ.

ಇದರಿಂದ ಕೆಂಪು ರಾಣಿ ಟೊಮೆಟೊ ವಿಷಕಾರಿಯಾಗುತ್ತಿದೆಯೇ ಎಂಬ ಆತಂಕ ವಿಜ್ಞಾನಿಗಳಲ್ಲಿಯೂ ಮನೆ ಮಾಡಿದೆ. ಹಲವೆಡೆ ಅಕಾಲಿಕ ಮಳೆ, ಇನ್ನು ಕೆಲವೆಡೆ ಅತಿವೃಷ್ಠಿ, ಅನಾವೃಷ್ಟಿಯಿಂದ ಹವಾಮಾನ ಬದಲಾಗಿದ್ದು, ಟೊಮೆಟೊ ಬೆಳೆ ಹಾಳಾಗುತ್ತಿದೆ. ಕೀಟಬಾಧೆಯೂ ಹೆಚ್ಚುತ್ತಿದೆ. ಈ ನಡುವೆ ಟೊಮೆಟೊಗೆ ಬಂಗಾರದ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ರೈತರು ಟೊಮೆಟೊ ಬೆಳೆಯನ್ನು ಕೀಟಗಳಿಂದ ರಕ್ಷಿಸಲು ಹೆಚ್ಚೆಚ್ಚು ಕೀಟನಾಶಕ ಸಿಂಪಡಣೆ ಮಾಡುತ್ತಿದ್ದಾರೆ.

ಸಾವಯವ ವಿಧಾನಗಳ ಬದಲು ಅತ್ಯಧಿಕ ರಾಸಾಯನಿಕ, ಕೀಟನಾಶಕಗಳನ್ನು ಸಿಂಪಡಿಸುತ್ತಿದ್ದರೆ. ಇದರಿಂದ ರೈತರ ತೋಟಗಳಿಗೆ ಮಾತ್ರವಲ್ಲ, ರೈತರಿಗೂ ಅಪಾಯವೇ. ಪ್ರಮುಖವಾಗಿ ಇಂತಹ ಟೊಮೆಟೊ ಬಳಸುವ ಗ್ರಾಹಕರಿಗೂ ಅಪಾಯ ಕಟ್ಟಿಟ್ಟಬುತ್ತಿ. ತರಕಾರಿ ಬೆಳೆಗಳಿಗೆ ಸಿಂಪಡಿಸುವ ರಾಸಾಯನಿಕಗಳು ತರಕಾರಿಗಳ ಮೇಲೆ ಕನಿಷ್ಟ 5-7 ದಿನಗಳವರೆಗೆ ಇರುತ್ತದೆ. ಹೀಗೆ ಸಿಂಪಡಣೆ ಮಾಡುವ ಕೀಟನಾಶಕಗಳ ಅಂಶಗಳು ಟೊಮೆಟೊ ಹಣ್ಣಿನ ಮೇಲೆ ಒಂದು ವಾರದಿಂದ 15 ದಿನಗಳವರೆಗೂ ಇರುತ್ತದೆ. ಔಷಧಿ ಅಥವಾ ಕೀಟನಾಶಕ ಸಿಂಪಡಿಸಿದ ರೈತ ಅದನ್ನು ನೇರವಾಗಿ ಮಾರುಕಟ್ಟೆಗೆ ತರುತ್ತಾನೆ. ಇದರಿಂದಾಗಿ ಹೋಟೆಲ್ ಆಹಾರಗಳ ಮೇಲೂ ಪರಿಣಾಮ ಬೀರುತ್ತದೆ. ಟೊಮೆಟೊ ಖರೀದಿಸುವ ಗ್ರಾಹಕರ ಆರೋಗ್ಯದ ಮೇಲೂ ದುಷ್ಪರ‍ಿಣಾಮ ಬೀಳುವ ಸಾಧ್ಯತೆ ಹೆಚ್ಚು.

15 ಕೆಜಿ ಟೊಮೆಟೊ ಬಾಕ್ಸ್ ಗೆ 2000 ರೂ ಗಡಿ ದಾಟಿರುವ ಹೊತ್ತಲ್ಲಿ ಟೊಮೆಟೊ ಬೆಳೆ ರಕ್ಷಿಸಿಕೊಳ್ಳಲು ರೈತ ಅನಿವಾರ್ಯವಾಗಿ ಕೀಟನಾಶಕಗಳ ಮೊರೆ ಹೋಗುತ್ತಿದ್ದು, ಬರಬರುತ್ತಾ ಟೊಮೆಟೊ ವಿಷಕಾರಿಯಾಗುತ್ತಿದೆಯೇ ಎಂಬ ಆತಂಕ ಮನೆ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...