ಹಾಸನ: ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನುಗಳನ್ನು ಇಟ್ಟು ಏನೆಲ್ಲ ಹರಸಾಹಸಗಳನ್ನು ಮಾಡುತ್ತಾರೆ. ಆದರೆ ಇಲ್ಲೋರ್ವ ಯುವಕ ತನ್ನ ಜಮೀನಿಗೆ ಬಂದ ಚಿರತೆಯನ್ನು ಸ್ವತ: ತಾನೇ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ನಡೆದಿದೆ.
ಜಮೀನಿಗೆ ಬಂದಿದ್ದ ಚಿರತೆಯನ್ನು ಯುವಕ ದುಸ್ಸಾಹಸ ಪಟ್ಟು ಹಿಡಿದು ಬಳಿಕ ಅದರ ಕೈಕಾಲು ಕಟ್ಟಿ ಚಿರತೆಯನ್ನು ಬೈಕ್ ಗೆ ಕಟ್ಟಿಕೊಂಡು ಅರಣ್ಯ ಇಲಾಖೆಗೆ ತೆರಳಿ ಚಿರತೆಯನ್ನು ಒಪ್ಪಿಸಿದ್ದಾನೆ. ವೇಣುಗೋಪಾಲ್ @ ಮುತ್ತು ಚಿರತೆ ಹಿಡಿದ ಯುವಕ.
ಸೆರೆಹಿಡಿದ ಚಿರತೆಗೆ ಗಂಡಸಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವಕನ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.