
ಆಸ್ತಿ ವಿವಾದದ ಹಿನ್ನೆಲೆ ತಮ್ಮಂದಿರೇ ಅಣ್ಣ ಉಸ್ಮಾನ್ ಎಂಬಾತನನ್ನು ಬರ್ಬರವಾಗಿ ಕೊಂದಿದ್ದಾರೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ-ತಮ್ಮಂದಿರ ನಡುವೆ ಜಗಳ ಉಂಟಾಗಿದ್ದು, ಜಗಳ ತಾರಕಕ್ಕೇರಿ ಅಣ್ಣನನ್ನೇ ಬರ್ಬರವಾಗಿ ಕೊಂದಿದ್ದಾರೆ.
ಸದ್ಯ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

