ಬಾಲಿವುಡ್ ನಟಿ ಆಲಿಯಾ ಭಟ್ ತನ್ನ ತಾಯಿ ಸೋನಿ ರಜ್ಡಾನ್ ಹಾಗೂ ಸಹೋದರಿ ಶಾಹೀನ್ ಭಟ್ ಜೊತೆಯಲ್ಲಿ ಇತ್ತೀಚಿಗೆ ಔತಣಕೂಟವೊಂದರಲ್ಲಿ ಭಾಗಿಯಾಗಿದ್ದು ಈ ಸಂದರ್ಭದಲ್ಲಿ ನಟಿ ಆಲಿಯಾ ಭಟ್ ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈನ ಫ್ಯಾನ್ಸಿ ರೆಸ್ಟಾರೆಂಟ್ ಒಂದರಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದ ಆಲಿಯಾ ಭಟ್ ಪಾದರಕ್ಷೆಯನ್ನು ಕಳೆದುಕೊಂಡಿದ್ದ ಫೋಟೋಗ್ರಾಫರ್ಗೆ ಅವರ ಪಾದರಕ್ಷೆಗಳನ್ನು ಹುಡುಕಿಕೊಳ್ಳಲು ಸಹಾಯ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಆಲಿಯಾ ತನ್ನ ತಾಯಿ ಹಾಗೂ ಸಹೋದರಿಯೊಂದಿಗೆ ರೆಸ್ಟಾರೆಂಟ್ನ ಹೊರಗೆ ಪಪ್ಪರಾಜಿಗಳಿಗೆ ಕಾಣಿಸಿಕೊಂಡಿದ್ದಾರೆ. ಮಾರ್ಗ ಮಧ್ಯದಲ್ಲಿ ಕಂಡ ಚಪ್ಪಲಿಯನ್ನು ನೋಡಿ ಇದು ಯಾರ ಚಪ್ಪಲಿ ಎಂದು ಆಲಿಯಾ ತನ್ನ ತಂದೆಯನ್ನು ಕೇಳಿದ್ದಾರೆ.
ಆಗ ಅಲ್ಲಿಯೇ ಇದ್ದ ಫೋಟೋಗ್ರಾಫರ್ ಒಬ್ಬರು ಇದು ನಮ್ಮಲ್ಲೇ ಒಬ್ಬ ಪಪ್ಪರಾಜಿಗೆ ಸೇರಿದ್ದು ಎಂದು ಹೇಳಿದ್ದಾರೆ. ಕೂಡಲೇ ಆ ಚಪ್ಪಲಿಯನ್ನು ತನ್ನ ಕೈನಿಂದ ಎತ್ತಿಕೊಂಡ ಆಲಿಯಾ ಅದನ್ನು ಸಂಬಂಧಪಟ್ಟ ವ್ಯಕ್ತಿಗೆ ನೀಡಿದ್ದಾರೆ.
ಆಲಿಯಾರ ಈ ವರ್ತನೆಗೆ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದು ಆಲಿಯಾ ಭಟ್ರಂತೆಯೇ ಯಾರೂ ಇಲ್ಲ. ಅವರು ಎಲ್ಲರೊಂದಿಗೆ ಸೌಮ್ಯವಾಗಿ ವರ್ತಿಸುತ್ತಾರೆ. ಆದರೆ ಇವರನ್ನು ಅನಗತ್ಯವಾಗಿ ಟ್ರೋಲ್ ಮಾಡಲಾಗ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.