Namma Metro : ‘ಮೆಟ್ರೋ’  ಪ್ರಯಾಣಿಕರಿಗೆ ಗುಡ್ ನ್ಯೂಸ್ : ಶೀಘ್ರದಲ್ಲೇ ಬರಲಿದೆ ‘ಮೆಟ್ರೋಮಿತ್ರಾ’ ಆ್ಯಪ್

ಬೆಂಗಳೂರು :   ‘ನಮ್ಮ ಮೆಟ್ರೋ’  ಪ್ರಯಾಣಿಕರಿಗೆ ಮತ್ತೊಂದು  ಗುಡ್ ನ್ಯೂಸ್ ಸಿಕ್ಕಿದ್ದು.  ಶೀಘ್ರದಲ್ಲೇ ‘ಮೆಟ್ರೋ ಮಿತ್ರಾ’ ಆ್ಯಪ್  ರಿಲೀಸ್ ಆಗಲಿದೆ.

ಹೌದು. ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಮಿತ್ರಾ ‍ ಆ್ಯಪ್ ಆಧಾರಿತ ಆಟೋರಿಕ್ಷಾ ಸೌಲಭ್ಯವನ್ನು ಆರಂಭಿಸಲಾಗುತ್ತಿದೆ, ಆಟೋ-ರಿಕ್ಷಾ ಮೆಟ್ರೋ ನಿಲ್ದಾಣಗಳ ಆರಂಭದಿಂದ ಕೊನೆವರೆಗೂ ಸೇವೆ ಲಭ್ಯವಾಗಲಿದೆ ಎಂದು ಆಟೋರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ  ಮಾಹಿತಿ ನೀಡಿದ್ದಾರೆ.

ಇದರಿಂದ ಮೆಟ್ರೋ ಇಳಿದ ತಕ್ಷಣ ಬೇರೋಂದು ಆಟೋಗೆ ಕಾಯುವುದು ಹಾಗೂ ಬುಕಿಂಗ್ ಮಾಡುತ್ತ ನಿಲ್ಲುವ ರಗಳೆ ಪ್ರಯಾಣಿಕರಿಗಿರುವುದಿಲ್ಲ. ಮೊದಲ ಎರಡು ಕಿಲೋಮೀಟರ್‌ಗಳಿಗೆ 30 ರೂ. ಮತ್ತು ನಂತರದ ಪ್ರತಿ ಕಿಲೋಮೀಟರ್‌ಗೆ 15 ರೂ. ಜೊತೆಗೆ 10 ರೂ. ಇತರೆ ಚಾರ್ಜಸ್​ಗೆ ಎಂದು ದರ ಫಿಕ್ಸ್ ಮಾಡಲಾಗಿದೆ. ಆಗಸ್ಟ್ 15 ರಂದು ಮೆಟ್ರೋ ಮಿತ್ರಾ’ ಆ್ಯಪ್  ಬಿಡುಗಡೆಯಾಗಲಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ  ಮಾಹಿತಿ ನೀಡಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read