KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬ್ಯಾಂಕ್ ಖಾತೆ ತೆರೆಯದ `ಪಡಿತರ ಚೀಟಿದಾರ’ರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

Published July 14, 2023 at 12:14 pm
Share
SHARE

ರಾಜ್ಯ ಸರ್ಕಾರದ ಆದೇಶದಂತೆ ಅಂತ್ಯೋದಯ(ನಾಲ್ಕು ಅಥವಾ ನಾಲ್ಕಕ್ಕಿಂತ  ಹೆಚ್ಚು ಸದಸ್ಯರು) ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ 5 ಕೆ.ಜಿ ಆಹಾರಧಾನ್ಯವನ್ನು ಸೇರಿಸಿ ಪ್ರತಿ ತಿಂಗಳು ಪ್ರತಿ ಫಲಾನುಭವಿಗೆ ತಲಾ 10 ಕೆಜಿ ಆಹಾರಧಾನ್ಯ ಉಚಿತವಾಗಿ ವಿತರಿಸಲು ಸರ್ಕಾರ ನಿರ್ಧರಿಸಿದ್ದು,  ಈ ಬಗ್ಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಬಿಡ್ದಾರರು ಆಹಾರಧಾನ್ಯವನ್ನು ಸರಬರಾಜು ಮಾಡುವವರೆಗೆ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿಗೆ ರೂ.34/-ರಂತೆ ಪಡಿತರ ಚೀಟಿದಾರರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಹಣವನ್ನು ವರ್ಗಾಯಿಸಬೇಕಾಗಿರುತ್ತದೆ.

 ಪಡಿತರ ಚೀಟಿಯಲ್ಲಿ ಕಡ್ಡಾಯವಾಗಿ ಕುಟುಂಬದ ಮುಖ್ಯಸ್ಥರು ನಮೂದಾಗಿರಬೇಕು  ಕುಟುಂಬದ ಮುಖ್ಯಸ್ಥರು  ನಿಧನಹೊಂದಿದ್ದಲ್ಲಿ, ಸಂಬಂಧಪಟ್ಟ  ತಾಲೂಕಿನ  ಆಹಾರ  ಶಾಖೆಗೆ  ಭೇಟಿ  ನೀಡಿ,  ಆಹಾರ  ನಿರೀಕ್ಷಕರಿಗೆ ಈ  ಬಗ್ಗೆ  ಮಾಹಿತಿ  ನೀಡಿ,  ಮೃತರ ಹೆಸರನ್ನು  ಪಡಿತರ  ಚೀಟಿಯಿಂದ  ತೆಗೆದು ಹಾಕಿ, ಇ-ಕೆವೈಸಿ  ಮೂಲಕ  ಕುಟುಂಬದ ಮುಖ್ಯಸ್ಥರನ್ನು  ನಮೂದು  ಮಾಡಿಕೊಳ್ಳಬೇಕು. ಒಂದಕ್ಕಿAತ ಹೆಚ್ಚು ಕುಟುಂಬದ ಮುಖ್ಯಸ್ಥರು ನಮೂದಾಗಿದ್ದಲ್ಲಿ ಅಂತಹವರಿಗೆ ನಗದು ವರ್ಗಾವಣೆಗೆ ಅವಕಾಶವಿರುವುದಿಲ್ಲ.

ಬ್ಯಾಂಕ್ ಖಾತೆ ಚಾಲ್ತಿಯಲ್ಲಿಲ್ಲದ, ಬ್ಯಾಂಕ್ ಖಾತೆ ಹೊಂದಿರದ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರದ ಪಡಿತರ ಚೀಟಿದಾರರ ಮಾಹಿತಿಯನ್ನು ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಚುರಪಡಿಸಿದ್ದು, ಪಡಿತರ ಚೀಟಿದಾರರು ಮಾಹಿತಿಯನ್ನು ಪಡೆದು ಕೂಡಲೇ ಬ್ಯಾಂಕ್ ಖಾತೆಯನ್ನು ತೆರೆಯುವ ಬಗ್ಗೆ/ಚಾಲ್ತಿಗೊಳಿಸುವ ಬಗ್ಗೆ ಕ್ರಮವಹಿಸಬೇಕು. ಇಲ್ಲವಾದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ಜುಲೈ 2023 ಮಾಹೆಯಲ್ಲಿ ನಗದು ವರ್ಗಾವಣೆ ಆಗುವುದಿಲ್ಲ.

 ಈ ಫಲಾನುಭವಿಗಳು 2023 ರ ಜುಲೈ 20 ರ ಒಳಗೆ ತಮ್ಮ ಬ್ಯಾಂಕ್ ಖಾತೆಗಳನ್ನು ಚಾಲ್ತಿಗೊಳಿಸಿದಲ್ಲಿ ಅಗಸ್ಟ್ ತಿಂಗಳಲ್ಲಿ ನಗದು ವರ್ಗಾವಣೆ ಮೂಲಕ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ಪಡಿತರ  ಚೀಟಿದಾರರು  ನೇರ  ನಗದು ವರ್ಗಾವಣೆ ಪ್ರಯೋಜನ ಪಡೆಯಲು  ಪ್ರತ್ಯೇಕವಾಗಿ ಅರ್ಜಿ  ಸಲ್ಲಿಸುವ  ಅವಶ್ಯಕತೆ  ಇರುವುದಿಲ್ಲ. ಪಡಿತರ ಚೀಟಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ  ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ವತಿಯಿಂದ ಬ್ಯಾಂಕ್ ಖಾತೆ ತೆರೆಯುವ ಸಂಬAಧ  ಕ್ರಮವಹಿಸಲಿದ್ದು, ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಸಿಬ್ಬಂದಿಗಳು ಶಿಬಿರವನ್ನು ನಡೆಸಿ ಸದ್ರಿ ಫಲಾನುಭವಿಗಳಿಗೆ ಆ ಕೂಡಲೇ ಬ್ಯಾಂಕ್ ಅಕೌಂಟ್ ತೆರೆದು ನೀಡುವರು. ಈ ಸಂಬAಧ ಸದ್ರಿ ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರು ಓಟಿಪಿ ಸ್ವೀಕರಿಸಬೇಕಾದ ಮೊಬೈಲ್, ಆಧಾರ್ ಕಾರ್ಡ್ ಪ್ರತಿ, ತರಬೇಕು.

 ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್  ವತಿಯಿಂದ ಈ ಕೆಳಕಂಡ ತಾಲೂಕುಗಳಲ್ಲಿ ನಿಗಧಿತ ದಿನಾಂಕಗಳAದು ಶಿಬಿರ ಆಯೋಜಿಸಲಾಗುವುದು.

 ಉಡುಪಿ ತಾಲೂಕಿನಲ್ಲಿ ಜುಲೈ 14 ರಂದು ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಕಚೇರಿ, ಜು. 18 ರಂದು ಉದ್ಯಾವರ ಗ್ರಾಮ ಪಂಚಾಯತ್ ಕಚೇರಿ, ಜು. 19 ರಂದು ಉಡುಪಿ ತಾಲೂಕು ಕಚೇರಿಯ ಆಹಾರ ಶಾಖೆ, ಜು. 20 ರಂದು ಕಲ್ಯಾಣಪುರ ಗ್ರಾಮ ಪಂಚಾಯತ್ ಕಚೇರಿ ಹಾಗೂ ಮಲ್ಪೆ ಅಂಚೆ ಕಚೇರಿಯಲ್ಲಿ ಶಿಬಿರ ಆಯೋಜಿಸಲಾಗುವುದು.

ಕಾಪು ತಾಲೂಕಿಗೆ ಸಂಬAಧಿಸಿದAತೆ ಜು. 15 ರಂದು ಕಾಪು ಅಂಚೆ ಕಚೇರಿ, ಜು. 17 ರಂದು ಕಟಪಾಡಿ ಗ್ರಾಮ ಪಂಚಾಯತ್, ಜು. 20 ರಂದು ಶಿರ್ವ ಅಂಚೆ ಕಚೇರಿ ಹಾಗೂ ಪಡುಬಿದ್ರೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ಆಯೋಜಿಸಲಾಗುವುದು.

 ಬ್ರಹ್ಮಾವರ ತಾಲೂಕಿನಲ್ಲಿ ಜು. 14 ರಂದು ಮಂದಾರ್ತಿ ಅಂಚೆ ಕಚೇರಿ, ಜು. 17 ರಂದು ಬ್ರಹ್ಮಾವರ ಅಂಚೆ ಕಚೇರಿ ಹಾಗೂ ಜು. 18 ರಂದು ಕೋಟಾ ಅಂಚೆ ಕಚೇರಿಯಲ್ಲಿ ಶಿಬಿರ ನಡೆಯಲಿದೆ.

ಕುಂದಾಪುರ ತಾಲೂಕಿನಲ್ಲಿ ಜು. 15 ರಂದು ಸಿದ್ಧಾಪುರ ಗ್ರಾಮ ಪಂಚಾಯತ್, ಜು. 19 ರಂದು ಹಾಲಾಡಿ ಗ್ರಾಮ ಪಂಚಾಯತ್ ಕಚೇರಿ ಹಾಗೂ ಜು. 20 ರಂದು ವಂಡ್ಸೆ ಅಂಚೆ ಕಚೇರಿಯಲ್ಲಿ ಶಿಬಿರ ನಡೆಯಲಿದೆ.

ಬೈಂದೂರು ತಾಲೂಕಿನಲ್ಲಿ ಜು. 15 ರಂದು ಹಳ್ಳಿಹೊಳೆ ಗ್ರಾಮ ಪಂಚಾಯತ್, ಜು. 17 ರಂದು ಬೈಂದೂರು ತಾಲೂಕು ಕಚೇರಿ ಆಹಾರ ಶಾಖೆ, ಜು. 20 ರಂದು ಕೊಲ್ಲೂರು ಗ್ರಾಮ ಪಂಚಾಯತ್ ಕಚೇರಿ ಹಾಗೂ ಮರವಂತೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ಏರ್ಪಡಿಸಲಾಗುವುದು.

ಕಾರ್ಕಳ ತಾಲೂಕಿನಲ್ಲಿ ಜು. 17 ರಂದು ಕಾರ್ಕಳ ತಾಲೂಕು ಕಚೇರಿ, ನಲ್ಲೂರು ಗ್ರಾಮ ಪಂಚಾಯತ್ ಹಾಗೂ ಬೆಳ್ಮಣ್ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಜು. 18 ರಂದು ಅಜೆಕಾರು ನಾಡ ಕಚೇರಿ, ಮಾಳ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಹಾಗೂ ಈದು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ನಡೆಯಲಿದೆ.

ಹೆಬ್ರಿ ತಾಲೂಕಿನಲ್ಲಿ ಜು. 15 ರಂದು ಹೆಬ್ರಿ ತಾಲೂಕು ಕಚೇರಿ, ಬೆಳ್ವೆ ಅಂಚೆ ಕಚೇರಿ ಹಾಗೂ ಮುದ್ರಾಡಿ ಅಂಚೆ ಕಚೇರಿಗಳಲ್ಲಿ ಶಿಬಿರ ಏರ್ಪಡಿಸಲಾಗುವುದು.   ಸಾರ್ವಜನಿಕರು   ಪಡಿತರ  ಹಣ   ವರ್ಗಾವಣೆ  ಬಗ್ಗೆ ವೆಬ್ ಸೈಟ್  ಮೂಲಕ  ನೇರ  ನಗದು  ಪಾವತಿಯಾದ  ಕುರಿತು  ಪರಿಶೀಲಿಸಬಹುದಾಗಿದೆ.   ಹೆಚ್ಚಿನ  ಮಾಹಿತಿಗಾಗಿ  ಸಂಬಂಧಪಟ್ಟ  ತಾಲೂಕು ಆಹಾರ  ಶಾಖೆಯನ್ನು ಸಂಪರ್ಕಿಸುವAತೆ ಹಾಗೂ ಸಾರ್ವಜನಿಕರು ಈ ಯೋಜನೆಯ  ಪ್ರಯೋಜನ  ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You Might Also Like

BREAKING : ತಿರುಪತಿಗೆ ‘ಬಾಂಬ್ ಬೆದರಿಕೆ’ : ISI, LET ಉಗ್ರರಿಂದ ಪಿತೂರಿ, ಬಿಗಿ ಭದ್ರತೆ.!

BIG NEWS: ನಟಿ ತ್ರಿಷಾ ಕೃಷ್ಣನ್ ಮನೆಗೆ ಬಾಂಬ್ ಬೆದರಿಕೆ

‘ಕಾಂತಾರ ಚಾಪ್ಟರ್-1’ ಸಿನಿಮಾ ನೋಡಿ ಹಾಡಿ ಹೊಗಳಿದ ರಾಕಿಂಗ್ ಸ್ಟಾರ್ ಯಶ್.!

ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ನಟಿ ರಚಿತಾ ರಾಮ್ ಗುಡ್ ನ್ಯೂಸ್ : ಮದುವೆ ಗುಟ್ಟು ರಟ್ಟು.!

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಮಗಳನ್ನ ಕೊಚ್ಚಿ ಕೊಂದು ಶವದ ಮೇಲೆ ನಿಂತು ತಾಯಿ ಆತ್ಮಹತ್ಯೆ.!

TAGGED:Ration cardರೇಷನ್ ಕಾರ್ಡ್bank accountಬ್ಯಾಂಕ್ ಖಾತೆಅನ್ನಭಾಗ್ಯAnnabhagyaಶಿಬಿರ ಆಯೋಜನೆcamp organized
Share This Article
Facebook Copy Link Print

Latest News

BREAKING : ತಿರುಪತಿಗೆ ‘ಬಾಂಬ್ ಬೆದರಿಕೆ’ : ISI, LET ಉಗ್ರರಿಂದ ಪಿತೂರಿ, ಬಿಗಿ ಭದ್ರತೆ.!
BIG NEWS: ನಟಿ ತ್ರಿಷಾ ಕೃಷ್ಣನ್ ಮನೆಗೆ ಬಾಂಬ್ ಬೆದರಿಕೆ
‘ಕಾಂತಾರ ಚಾಪ್ಟರ್-1’ ಸಿನಿಮಾ ನೋಡಿ ಹಾಡಿ ಹೊಗಳಿದ ರಾಕಿಂಗ್ ಸ್ಟಾರ್ ಯಶ್.!
ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ನಟಿ ರಚಿತಾ ರಾಮ್ ಗುಡ್ ನ್ಯೂಸ್ : ಮದುವೆ ಗುಟ್ಟು ರಟ್ಟು.!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ರಾಜ್ಯ ಸರ್ಕಾರದಿಂದ ವಿಕಲಚೇತನರಿಗೆ ಗುಡ್ ನ್ಯೂಸ್ :   ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
BIG NEWS : ಕರ್ನಾಟಕ ‘SSLC’ ಅರ್ಧವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ, ಸೆ.12 ರಿಂದ ಪರೀಕ್ಷೆ ಆರಂಭ.!
ನಿಂಬೆ ಹಣ್ಣಿನ ದೀಪ ಹಚ್ಚುವ ಸರಿಯಾದ ಸ್ಥಳ ಯಾವುದು ? ನಿಮಗೆ ತಿಳಿದಿರಲಿ ಈ ಮಾಹಿತಿ
BREAKING : ‘ಧರ್ಮಸ್ಥಳ ಕೇಸ್’ ಗೆ ಬಿಗ್ ಟ್ವಿಸ್ಟ್ : ಬಂಗ್ಲೆಗುಡ್ಡ ಕಾಡಿನಲ್ಲಿ ಮತ್ತಷ್ಟು ಮೂಳೆಗಳು  ಪತ್ತೆ.!

Automotive

MG ಆಸ್ಟರ್ ಕಾರು ಈಗ ಇನ್ನಷ್ಟು ಅಗ್ಗ: ಜುಲೈನಲ್ಲಿ 95,000 ರೂ. ವರೆಗೆ ಭಾರಿ ಡಿಸ್ಕೌಂಟ್ !
ALERT : ‘ಮೊಬೈಲ್’ ಬಳಕೆದಾರರೇ ಎಚ್ಚರ : ಈ 10 ನಂಬರ್ ಗಳಿಂದ ಕಾಲ್ ಬಂದ್ರೆ  ಅಪ್ಪಿ ತಪ್ಪಿಯೂ ರಿಸೀವ್ ಮಾಡ್ಬೇಡಿ.!
ಶಾಕಿಂಗ್: ಪೊಲೀಸ್ ಪುತ್ರನ ರೇಸ್ ಹುಚ್ಚಿಗೆ ಇಬ್ಬರ ಬಲಿ !

Entertainment

BREAKING : 60.48 ಕೋಟಿ ರೂ. ಹೂಡಿಕೆ ವಂಚನೆ ಕೇಸ್ : ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸಮನ್ಸ್ ಜಾರಿ.!
BREAKING : ‘ಗಣಪ’ ಸಿನಿಮಾ ಖ್ಯಾತಿಯ ಸ್ಯಾಂಡಲ್’ವುಡ್ ನಟ ‘ಸಂತೋಷ್ ಬಾಲರಾಜ್’ ನಿಧನ.!
ನಗು ತರಿಸುತ್ತೆ ʼಹೋಂ ವರ್ಕ್ʼ ಮಾಡೋಕೆ ಈ ಮಗು ಕಂಡುಕೊಂಡ ಮಾರ್ಗ | Viral Video

Sports

ಪಾಕಿಸ್ತಾನ ಕ್ರಿಕೆಟ್‌ ನಲ್ಲಿ ಭುಗಿಲೆದ್ದ ಆಕ್ರೋಶ: ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ರಾಜೀನಾಮೆಗೆ ಶಾಹಿದ್ ಅಫ್ರಿದಿ ಒತ್ತಾಯ
BREAKING: ಏಷ್ಯಾ ಕಪ್ ಕದ್ದ ಪಾಕ್ ಗೆ ಮುಖಭಂಗ: ಬಿಸಿಸಿಐಗೆ ಕ್ಷಮೆ ಕೇಳಿದ ಬೆನ್ನಲ್ಲೇ ಭಾರತ ಗೆದ್ದ ಟ್ರೋಫಿ ಹಸ್ತಾಂತರಿಸಿದ ನಖ್ವಿ
ಏಷ್ಯಾ ಕಪ್ ಟ್ರೋಫಿ ವಿವಾದದ ನಡುವೆ ಬಿಸಿಸಿಐಗೆ ಕ್ಷಮೆಯಾಚಿಸಿದ ಮೊಹ್ಸಿನ್ ನಖ್ವಿ: ಆದರೂ ಟ್ರೋಫಿ ಕೊಡಲು ನಿರಾಕರಣೆ

Special

ಅವಧಿ ಮುಗಿದ ಮಾತ್ರೆಗಳು ನಿಮ್ಮ ಮನೆಯಲ್ಲಿ ಇದೆಯಾ ? ಹಾಗಾದ್ರೆ ಹೀಗೆ ಮಾಡಿ
ನಿಮ್ಮ ತ್ವಚೆಯನ್ನು ಹಾನಿಗೊಳಿಸುತ್ತೆ ಮೇಕಪ್ ಉತ್ಪನ್ನದಲ್ಲಿರುವ ಈ ವಿಷಕಾರಿ ಅಂಶ
ಫಟಾ ಫಟ್‌ ತೂಕ ಇಳಿಸುತ್ತವೆ ಈ ತಾಜಾ ಹಣ್ಣುಗಳು…!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?