ನವದೆಹಲಿ: ಎಲ್ಲಾ ಐಸಿಸಿ ಟೂರ್ನಿಗಳಲ್ಲಿ ಬಹುಮಾನದ ಮೊತ್ತವು ಪುರುಷರು ಮತ್ತು ಮಹಿಳೆಯರಿಗೆ ಒಂದೇ ಆಗಿರುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ.
ಸಮಾನತೆ ಮತ್ತು ಸಬಲೀಕರಣದ ಹೊಸ ಯುಗ ಆರಂಭ. ಲಿಂಗ ಸಮಾನತೆ ಕಡೆಗೆ ಒಂದು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಘೋಷಿಸಲು ನಾನು ರೋಮಾಂಚನಗೊಂಡಿದ್ದೇನೆ. ಐಸಿಸಿಯ ಎಲ್ಲಾ ಟೂರ್ನಿಗಳಲ್ಲಿ ಬಹುಮಾನದ ಹಣ ಪುರುಷರು ಮತ್ತು ಮಹಿಳೆಯರಿಗೆ ಒಂದೇ ಆಗಿರುತ್ತವೆ ಎಂದು ತಿಳಿಸಿದ್ದಾರೆ.
ಈ ಮಹತ್ವದ ಪ್ರಯತ್ನವನ್ನು ಸಾಧಿಸಲು ಸಹಾಯ ಮಾಡುವಲ್ಲಿ ಬೆಂಬಲ ನೀಡಿದ ಸಹ ಮಂಡಳಿಯ ಸದಸ್ಯರಿಗೆ ನಾನು ಧನ್ಯವಾದ ಹೇಳುತ್ತೇನೆ. ಕ್ರಿಕೆಟ್ ಭವಿಷ್ಯದ ಕಡೆಗೆ ಕೆಲಸ ಮಾಡೋಣ ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
BCCI Secretary Jay Shah announces, "The prize money at all ICC events will be the same for men and women." pic.twitter.com/qcBTAwysze
— ANI (@ANI) July 13, 2023

