ರಸ್ತೆಗೆ ಕೈ ಅಂಟಿಸಿಕೊಂಡ ಪ್ರತಿಭಟನಾಕಾರರು: ಇದೆಂಥಾ ವಿಚಿತ್ರ ಎಂದ ಜನ….!

ಇತ್ತೀಚಿಗೆ ನಡೆದ ಪ್ರತಿಭಟನೆಯೊಂದರಲ್ಲಿ ಹ್ಯಾಂಬರ್ಗ್​ ಹಾಗೂ ಡಸೆಲ್ಡಾರ್ಫ್​ನಲ್ಲಿರುವ ಲಾಸ್ಟ್​ ಜನರೇಶನ್​ ಗ್ರೂಪ್​ನ ಕಾರ್ಯಕರ್ತರು ಸ್ಥಳೀಯ ರನ್​ವೇಗಳ ಒಳಗೆ ನುಸುಳಲು ಹಾಗೂ ತಮ್ಮನ್ನು ತಾವು ಒಂದು ಸ್ಥಳದಲ್ಲಿ ಅಂಟಿಸಿಕೊಳ್ಳೋದ್ರಲ್ಲಿ ಯಶಸ್ವಿಯಾದರು. ಈ ಪ್ರತಿಭಟನೆಯಿಂದಾಗಿ ವಿಮಾನ ಕಾರ್ಯಾಚರಣೆಗೆ ಅಡೆತಡೆ ಉಂಟಾಗಿತ್ತು.

ಕೆಲ ಸಮಯದ ಬಳಿಕ ಪ್ರತಿಭಟನಾಕಾರರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಅಧಿಕಾರಿಗಳು ಯಶಸ್ವಿಯಾದರಾದರೂ ಸಹ ಇದರಿಂದ ಕೆಲವು ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.

ಬರ್ಲಿನ್​ನಿಂದ ವೈರಲ್​ ಆಗಿರುವ ಮತ್ತೊಂದು ವಿಡಿಯೋದಲ್ಲಿ ಪ್ರತಿಭಟನಾಕಾರರ ಪೈಕಿ ಇಬ್ಬರು ಕಾಂಕ್ರಿಟ್​ ಹಾಗೂ ಎಪಾಕ್ಸಿ ರಾಳದ ಮಿಶ್ರಣವನ್ನು ಬಳಕೆ ಮಾಡಿಕೊಂಡು ತಮ್ಮ ಕೈಗಳನ್ನು ರಸ್ತೆಗೆ ಅಂಟಿಸಿಕೊಂಡಿದ್ದಾರೆ. ಇವರ ಕೈಗಳನ್ನು ಕತ್ತರಿಸಿ ತೆಗೆಯಬೇಕಾಗಿ ಬರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

https://twitter.com/i/status/1679083757175808000

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read