
ತೆಲುಗು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಆಡಿಷನ್‌ಗೆ ಹೋದಾಗ ನಿರ್ದೇಶಕರೊಬ್ಬರು, ನೀನು ದಪ್ಪ ಇದ್ದೀಯ, ನಾಯಕಿಯರು ಸ್ಲಿಮ್ ಮತ್ತು ಸುಂದರವಾಗಿರಬೇಕು ಎಂದು ಹೇಳುತ್ತಿದ್ದರು ಎಂದಿದ್ದಾರೆ. ನಟಿಯ ಈ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ.
ದೇಹದ ತೂಕದ ಬಗ್ಗೆ ಹಿಂಜರಿಕೆಯಿದ್ದರೂ ಭರವಸೆಯನ್ನು ಬಿಡದೆ ಆಡಿಷನ್‌ಗೆ ಹೋಗುವುದನ್ನು ಮುಂದುವರೆಸಿದೆ ಎಂದು ಕಾವ್ಯಾ ಹೇಳಿದ್ದಾರೆ. ಬಳಗಂ ಚಿತ್ರದ ಯಶಸ್ಸಿನ ನಂತರ ನಟಿ ಕಾವ್ಯಾಗೆ ಹೆಚ್ಚಿನ ಆಫರ್‌ಗಳು ಬರುತ್ತಿವೆ ಎಂದು ವರದಿಯಾಗಿದೆ.
ಸಿನಿಮಾರಂಗದಲ್ಲಿ ನಟಿಯರು ಬಾಡಿ ಶೇಮಿಂಗ್ ಗೆ ಒಳಗಾಗಿರೋದು ಹೊಸದೇನಲ್ಲ. ಆಗಾಗ್ಗೆ ಈ ಬಗ್ಗೆ ನಟಿಯರು ಬಹಿರಂಗವಾಗಿ ಮಾತನಾಡುತ್ತಿರುತ್ತಾರೆ.

