ಪುತ್ರಿ ಮತ್ತಾಕೆಯ ಪ್ರಿಯಕರನನ್ನು ಹತ್ಯೆ ಮಾಡಿದ್ದ ಆರೋಪಿ ‌ʼಅರೆಸ್ಟ್ʼ

ಒಡಿಶಾ: ಮರ್ಯಾದಾ ಹತ್ಯೆ ಪ್ರಕರಣವೊಂರದಲ್ಲಿ ಕಲಹಂಡಿ ಠಾಣಾ ಪೊಲೀಸರು ಬುಧವಾರದಂದು ಕಲಹಂಡಿಯ ಧರ್ಮಗಢದಲ್ಲಿ ತನ್ನ ಅಪ್ರಾಪ್ತ ಬಾಲಕಿಯನ್ನೇ ತಂದೆಯು ಕೊಂದ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ ಅಪ್ರಾಪ್ತ ಮಕ್ಕಳು ಮನೆಯಲ್ಲಿ ತಮ್ಮ ಪ್ರೀತಿ ಒಪ್ಪುತ್ತಿಲ್ಲ ಎಂದು ತಿಳಿದ ಬಳಿಕ ಜೂನ್​ 30ರಂದು ಮನೆಯಿಂದ ಪರಾರಿಯಾಗಿದ್ದರು.

ಇದಾದ ಬಳಿಕ ಬಾಲಕಿಯ ಕುಟುಂಬಸ್ಥರು ಅಪ್ರಾಪ್ತರಿಬ್ಬರನ್ನು ಧರ್ಮಗಢ್​ ಸಮೀಪದ ಮಿಲ್​ ಒಂದರಲ್ಲಿ ಪತ್ತೆ ಮಾಡಿದರು. ಇವರ ಕೃತ್ಯದಿಂದ ಕೋಪಗೊಂಡಿದ್ದ ಬಾಲಕಿಯ ತಂದೆ, ಸೋದರ ಮಾವ ಹಾಗೂ ಚಿಕ್ಕಪ್ಪ ಇಬ್ಬರನ್ನೂ ಕತ್ತು ಹಿಸುಕಿ ಕೊಲೆ ಮಾಡಿದ್ದರು.

ಇದಾದ ಬಳಿಕ ಈ ಕೊಲೆ ಪ್ರಕರಣವನ್ನು ಮುಚ್ಚಿಡುವ ಉದ್ದೇಶದಿಂದ ಬಾಲಕಿಯ ತಂದೆ ಇಬ್ಬರ ಮೃತದೇಹವನ್ನು ಮರವೊಂದಕ್ಕೆ ನೇತು ಹಾಕಿ ಅತ್ಮಹತ್ಯೆ ಎಂಬಂತೆ ಬಿಂಬಿಸಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಮೊದಲು ಬಾಲಕಿಯ ತಂದೆಯನ್ನು ಬಂಧಿಸಿದ್ದಾರೆ. ಇದಾದ ಬಳಿಕ ಬುಧವಾರದಂದು ಬಾಲಕಿಯ ಸೋದರ ಮಾವ ಹಾಗೂ ಚಿಕ್ಕಪ್ಪನನ್ನು ಕೊಲೆ ಪ್ರಕರಣದ ಅಡಿಯಲ್ಲಿ ಬಂಧಿಸಲಾಗಿದೆ.

ಇನ್ನು ಈ ಪ್ರಕರಣ ಸಂಬಂಧ ಮಾತನಾಡಿದ ಕಲಹಂಡಿ ಎಸ್ಪಿ ಅಪ್ರಾಪ್ತರು ಜೂನ್​ 30ರಂದು ಮನೆಯಿಂದ ಪರಾರಿಯಾಗಿದ್ದರು. ವಿವರವಾದ ತನಿಖೆಯ ಬಳಿಕ ಅಪ್ರಾಪ್ತ ಬಾಲಕಿಯ ತಂದೆ, ಚಿಕ್ಕಪ್ಪ ಹಾಗೂ ಸೋದರ ಮಾವ ಸೇರಿಕೊಂಡು ಅಪ್ರಾಪ್ತ ಪ್ರೇಮಿಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂಬ ವಿಚಾರಣೆ ವೇಳೆ ಬಯಲಾಗಿತ್ತು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read