HomeKarnataka'PUC' ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಎಲ್ಲಾ ವಿಷಯಗಳಿಗೂ ಸಿಗಲಿದೆ 'Internal Marks'

‘PUC’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಎಲ್ಲಾ ವಿಷಯಗಳಿಗೂ ಸಿಗಲಿದೆ ‘Internal Marks’

ಬೆಂಗಳೂರು : ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಇನ್ಮುಂದೆ ಎಲ್ಲಾ ವಿಷಯಗಳಿಗೂ ಇಂಟರ್ನಲ್ ಮಾರ್ಕ್ಸ್ ಸಿಗಲಿದೆ. ರಾಜ್ಯ ಸರ್ಕಾರವು ಪಿಯುಸಿ ತರಗತಿಗಳಿಗೆ ಹೊಸ ಅಂಕ ಮಾದರಿ ಜಾರಿ ಮಾಡಿದ್ದು, ಈ ಮೂಲಕ ಪ್ರಾಯೋಗಿಕ ಪರೀಕ್ಷೆ ಹೊಂದಿರದ ವಿಷಯಗಳಿಗೆ ಇನ್ಮುಂದೆ 20 ಅಂಕ ಆಂತರಿಕ ಅಂಕ ನೀಡಲು ನಿರ್ಧಾರ ಮಾಡಲಾಗಿದೆ.

ಮೊದಲು ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ 100 ಅಂಕಕ್ಕೆ ಪರೀಕ್ಷೆ ಬರೆಯಬೇಕಿತ್ತು. ಈಗ ಈ ನಿಯಮ ಬದಲಾವಣೆ ಮಾಡಿ, 20 ಆಂತರಿಕ ಅಂಕ & 80 ಅಂಕ ಥಿಯರಿ ಪರೀಕ್ಷೆಗೆ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.ಪ್ರಥಮ ಮತ್ತು ದ್ವಿತಿಯ ಪಿಯುಸಿ ಎರಡು ತರಗತಿಗಳಿಗೆ ಈ ಹೊಸ ನಿಯಮ ಅನ್ವಯವಾಗಲಿದೆ. ಪ್ರಾಯೋಗಿಕ ಪರೀಕ್ಷೆ ಹೊಂದಿರದ ವಿಷಯಗಳಿಗೆ ಇನ್ಮುಂದೆ 20 ಅಂಕ ಆಂತರಿಕ ಅಂಕ ನೀಡಲು ನಿರ್ಧರಿಸಲಾಗಿದೆ.

ಪ್ರಾಯೋಗಿಕ ಪರೀಕ್ಷೆಗಳು ಇಲ್ಲದ ಎಲ್ಲಾ ವಿಷಯಗಳಿಗೆ ಇನ್ನು ಮುಂದೆ 20 ಆಂತರಿಕ ಅಂಕಗಳನ್ನು ನಿಗದಿ ಮಾಡಲಾಗಿದೆ.ವಿಜ್ಞಾನದ ವಿಷಯಗಳಲ್ಲಿ 70 ಅಂಕಗಳಿಗೆ ಥಿಯರಿ ಪರೀಕ್ಷೆ ಮತ್ತು 30 ಅಂಕಗಳನ್ನು ಪ್ರಾಯೋಗಿಕ ಪರೀಕ್ಷೆ ಆಧರಿತ ಆಂತರಿಕ ಅಂಕಗಳಾಗಿ ನೀಡಲಾಗುತ್ತದೆ. ಇನ್ನು ವಿಜ್ಞಾನ ಹೊರತಾದ ಇತರ ವಿಷಯಗಳಲ್ಲಿ ಮೊದಲು 100 ಅಂಕಗಳಿಗೆ ಪರೀಕ್ಷೆ ನಡೆಯುತ್ತಿತ್ತು. ಇನ್ನು 80 ಅಂಕಗಳಿಗೆ ಮಾತ್ರ ಪರೀಕ್ಷೆ ಇರುತ್ತದೆ. ಉಳಿದ 20 ಅಂಕವನ್ನು ಇಂಟರ್ನಲ್ ಮಾರ್ಕ್ಸ್ ಆಗಿ ನಿಗದಿ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular