ಬೆಂಗಳೂರು : ಶಕ್ತಿ ಯೋಜನೆ ಎಫೆಕ್ಟ್ ಹಿನ್ನೆಲೆ ಸರ್ಕಾರಿ ಬಸ್ ಗೆ ವಿದ್ಯಾರ್ಥಿಗಳು ಕಲ್ಲು ತೂರಿದ ಘಟನೆ ಯಾದಗಿರಿ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಡೆದಿದೆ.
ಬಸ್ ನಿಲ್ಲಿಸಿದೇ ಮುಂದಕ್ಕೆ ಹೋದ ಹಿನ್ನೆಲೆ ರೊಚ್ಚಿಗೆದ್ದ ವಿದ್ಯಾರ್ಥಿಗಳು ಸಾರಿಗೆ ಬಸ್ ಗೆ ಕಲ್ಲು ತೂರಿದ್ದಾರೆ. ಗ್ರಾಮದಲ್ಲಿ ಶಾಲೆಗೆ ಹೋಗಲು ವಿದ್ಯಾರ್ಥಿಗಳು ಬಸ್ ಗಾಗಿ ಕಾಯುತ್ತಿದ್ದರು, ಕಲಬುರಗಿಯಿಂದ ಯಾದಗಿರಿ ಕಡೆ ಬರ್ತಾ ಇದ್ದ ಬಸ್ ನಿಲ್ಲಿಸುವಂತೆ ಕೈ ಅಡ್ಡ ಹಾಕಿದ್ದಾರೆ. ಆದರೆ ಚಾಲಕ ಬಸ್ ನಿಲ್ಲಿಸದೇ ಮುಂದಕ್ಕೆ ಹೋಗಿದ್ದಾರೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಸರ್ಕಾರಿ ಬಸ್ ಗೆ ಕಲ್ಲು ತೂರಿದ್ದಾರೆ.
ಬಸ್ ನಿಲ್ಲಿಸಿಲ್ಲವೆಂದು ರೊಚ್ಚಿಗೆದ್ದ ಮಹಿಳೆಯೊಬ್ಬರು ಬಸ್ ಗೆ ಕಲ್ಲು ತೂರಿದ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ನಡೆದಿತ್ತು. ಘಟನೆ ಸಂಬಂಧ ಬಸ್ ಚಾಲಕ ಹಾಗೂ ನಿರ್ವಾಹಕ ಮುಕ್ಕಣ್ಣ ಕುಕನೂರು ಅವರು ಕಲ್ಲು ಎಸೆದ ಮಹಿಳೆ ಸೇರಿ ಎಲ್ಲಾ ಪ್ರಯಾಣಿಕರ ಸಮೇತ ಮುನಿರಾಬಾದ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಮಹಿಳೆಯಿಂದ 5 ಸಾವಿರ ದಂಡ ಕಟ್ಟಿಸಿಕೊಂಡು ವಾಪಸ್ ಕಳುಹಿಸಿದ್ದರು. ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದ ಎಕ್ಸ್ ಪ್ರೆಸ್ ಬಸ್ ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿತ್ತು. ಇಲಕಲ್ಲ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬುವರು ಬಸ್ ನಿಲ್ಲಿಸಿಲ್ಲವೆಂದು ಬಸ್ ಗೆ ಕಲ್ಲು ಎಸೆದಿದ್ದರು.
ಸಾಂದರ್ಭಿಕ ಚಿತ್ರ