
ವಿಜಯಪುರದ ವೆಂಕಟೇಶ್ವರ ನಗರದ ನಿವಾಸಿ ರಮೇಶ ಕೂಡಿಗನೂರು (60) ಎಂಬ ವ್ಯಕ್ತಿಯನ್ನು ಸ್ವಂತ ಮಗನೇ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪುತ್ರ ಅಮೀತ್ ಕೂಡಿಗನೂರು ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಮಾದಕ ವ್ಯಸನಿಯಾಗಿದ್ದ ಅಮಿತ್ ದುಷ್ಚಟದಿಂದ ದೂರವಿರುವಂತೆ ರಮೇಶ್ ಬುದ್ದಿಮಾತು ಹೇಳಿದ್ದರು. ಇದರಿಂದ ಕೋಪಗೊಂಡ ಮಗ ಅಮಿತ್ ರಾತ್ರಿ ಮಲಗಿದ್ದ ವೇಳೆ ರಮೇಶ್ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

