
40 ವರ್ಷದ ವಿನಯ್ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಪತ್ನಿ ಆಶಾ ಹಾಗೂ ಅವರ ಪೋಷಕರು ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ವಿಷ ಸೇವಿಸುವ ಮುನ್ನ ವಿಡಿಯೋ ಮಾಡಿಟ್ಟಿರುವ ವಿನಯ್, ನನ್ನ ಸಾವಿಗೆ ನನ್ನ ಪತ್ನಿ ಆಶಾ, ಅತ್ತೆ ರತ್ನಮ್ಮ, ನಾದಿನಿ ಉಷಾ ಕಾರಣ. ಆಶಾ ಕುಟುಂಬಸ್ಥರಿಂದ ನನಗೆ ಮಾನಸಿಕ ಚಿತ್ರಹಿಂಸೆಯಾಗಿದೆ. ಈವರೆಗೆ ಎಲ್ಲವನ್ನೂ ಸಹಿಸಿಕೊಂಡಿದ್ದೆ. ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.

