HomeKarnatakaಅವನ ವೈಯಕ್ತಿಕ ತರಲೆಗೆ ನಾನೇಕೆ ಬರಲಿ...? ಯತ್ನಾಳ್ ಪರ ಬಿಜೆಪಿ ಧರಣಿಗೆ ಸಾಥ್ ನೀಡದ ಶಿವರಾಮ್...

ಅವನ ವೈಯಕ್ತಿಕ ತರಲೆಗೆ ನಾನೇಕೆ ಬರಲಿ…? ಯತ್ನಾಳ್ ಪರ ಬಿಜೆಪಿ ಧರಣಿಗೆ ಸಾಥ್ ನೀಡದ ಶಿವರಾಮ್ ಹೆಬ್ಬಾರ್

ಬೆಂಗಳೂರು: ಅವನ ವೈಯಕ್ತಿಕ ತರಲೆಗೆ ನಾನೇಕೆ ಬರಲಿ, ನಾನು ಬರುವುದಿಲ್ಲ ಎಂದು ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬೈರತಿ ಸುರೇಶ್ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರ ನಡುವೆ ಅಧಿಕಾರಿಗಳ ಪೋಸ್ಟಿಂಗ್ ವಿಚಾರಕ್ಕೆ ಜಟಾಪಟಿ ವೇಳೆ ಪ್ರತಿಪಕ್ಷ ಸದಸ್ಯರು ಧರಣಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಧರಣಿಯಲ್ಲಿ ಬಿಜೆಪಿಯ ಶಿವರಾಂ ಹೆಬ್ಬಾರ್ ಭಾಗವಹಿಸದೆ ತಮ್ಮ ಆಸನದಲ್ಲೇ ಕುಳಿತುಕೊಂಡಿದ್ದಾರೆ. ಬೈರತಿ ಸುರೇಶ್ ಅವರ ಮಾತಿನಿಂದ ಕೆರಳಿದ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದ್ದು, ಈ ವೇಳೆ ಎಸ್.ಟಿ. ಸೋಮಶೇಖರ್ ಬಾರೋ ಕಾರ್ಮಿಕ ಸುಮ್ಮನೆ ಕುಳಿತುಕೊಂಡಿದ್ದೀಯಲ್ಲ ಎಂದು ಕರೆದಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಶಿವರಾಮ್ ಹೆಬ್ಬಾರ್, ಅವನ ವಯಕ್ತಿಕ ತರಲೆಗೆ ನಾನೇಕೆ ಬರಲಿ? ನಾನು ಬರುವುದಿಲ್ಲ ಎಂದು ಹೇಳಿ ತಮ್ಮ ಆಸನದಲ್ಲಿ ಕುಳಿತುಕೊಂಡಿದ್ದು, ಧರಣಿಯಲ್ಲಿ ಪಾಲ್ಗೊಳ್ಳದೇ ಗಮನಸೆಳೆದಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular