ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿದೆ. ಸ್ತನ ಕ್ಯಾನ್ಸರ್ ಬಗ್ಗೆ ನಾವು ಗೂಗಲ್ನಲ್ಲಿ ಅನೇಕ ವಿಷಯಗಳನ್ನು ಓದುತ್ತೇವೆ.
ಆದರೆ ಸ್ತನ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವುದು ಹೇಗೆ ಅನ್ನೋದು ಬಹುದೊಡ್ಡ ಸವಾಲು. ಕ್ಯಾನ್ಸರ್ ಮೂರನೇ ಹಂತಕ್ಕೆ ಪ್ರವೇಶಿಸಿಬಿಟ್ಟರೆ ಗುಣಮುಖವಾಗುವುದು ಕಠಿಣ. ಹಾಗಾಗಿ ಆರಂಭದಲ್ಲೇ ಅದನ್ನು ಪತ್ತೆ ಮಾಡಿ ಚಿಕಿತ್ಸೆ ಪಡೆಯಬೇಕು.
ಸ್ತನ ಕ್ಯಾನ್ಸರ್ ಇತರ ಕ್ಯಾನ್ಸರ್ಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಸ್ತನ ನೋವು, ಡಿಂಪ್ಲಿಂಗ್ ಮತ್ತು ಮೊಲೆ ತೊಟ್ಟುಗಳ ವಿಲೋಮ ಹೀಗೆ ಅನೇಕ ಲಕ್ಷಣಗಳನ್ನು ಇದು ಒಳಗೊಂಡಿರುತ್ತದೆ. ಸ್ತನ ಕ್ಯಾನ್ಸರ್ ಬಗ್ಗೆ ಸ್ವಯಂ ಪರೀಕ್ಷೆ ಮಾಡಿಕೊಳ್ಳಬಹುದು. ಸ್ತನ ಕ್ಯಾನ್ಸರ್ನಿಂದ ಪಾರಾಗಬೇಕಾದರೆ ಮಹಿಳೆಯರು ಕಾಲಕಾಲಕ್ಕೆ ಸ್ವಯಂ ಪರೀಕ್ಷೆ ಮಾಡಿಕೊಳ್ಳಬೇಕು. ಭಾರತದಲ್ಲಿ ಶೇ.25 ರಿಂದ 32ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ.
ಹಾಗಾಗಿ ಸ್ತನಗಳ ಸ್ವಯಂ ಪರೀಕ್ಷೆಯನ್ನು ಮಾಡುವುದು ಬಹಳ ಮುಖ್ಯ. ನೀವೇ ಪರಿಶೀಲಿಸಿದಾಗ, ಅದರ ಆರಂಭಿಕ ಹಂತವನ್ನು ಸುಲಭವಾಗಿ ಕಂಡುಹಿಡಿಯಬಹುದು. ಈ ಮಾರಣಾಂತಿಕ ರೋಗವನ್ನು ಸಕಾಲದಲ್ಲಿ ತಡೆಯಬಹುದು.
ಎದೆಯಲ್ಲಿ ಯಾವುದೇ ರೀತಿಯ ಗಡ್ಡೆ, ಅಥವಾ ನೋವು ಇದ್ದರೆ ಮೊದಲು ಕನ್ನಡಿಯ ಮುಂದೆ ನಿಂತುಕೊಳ್ಳಿ. ಕೋಣೆಯಲ್ಲಿ ಚೆನ್ನಾಗಿ ಬೆಳಕಿರಲಿ. ಭುಜಗಳನ್ನು ನೇರಗೊಳಿಸಿ. ತೋಳನ್ನು ಆರಾಮವಾಗಿ ಬದಿಯಲ್ಲಿ ಇರಿಸಿ, ನಂತರ ಕೈಗಳ ಸಹಾಯದಿಂದ ಸ್ತನವನ್ನು ಪರೀಕ್ಷಿಸಿ.
ಗಾತ್ರದಲ್ಲಿ ಏನಾದರೂ ವ್ಯತ್ಯಾಸವಿದೆಯೇ ಎಂದು ಕನ್ನಡಿಯಲ್ಲಿ ಪರೀಕ್ಷಿಸಿ ಮತ್ತು ಸ್ತನದ ಆಕಾರವನ್ನು ಕೂಡ ಸರಿಯಾಗಿ ಪರೀಕ್ಷಿಸಿ. ನಿಪ್ಪಲ್ಗಳ ಬಣ್ಣ ಬದಲಾಗಿದೆಯೇ ಎಂಬುದನ್ನು ಮೊದಲು ಪರೀಕ್ಷಿಸಿ. ಅದರಲ್ಲಿ ಯಾವುದೇ ರೀತಿಯ ಕಲೆ ಅಥವಾ ಮಚ್ಚೆ ಇದೆಯೇ ಎಂಬುದನ್ನೂ ಗಮನಿಸಬೇಕು. ಮುಂಭಾಗದಿಂದ ಸ್ವಲ್ಪ ಒತ್ತಿದಾಗ ಬಿಳಿ ಬಣ್ಣದ ನೀರು ಹೊರಬರುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಸ್ತನವನ್ನು ಮಾತ್ರವಲ್ಲದೆ ಕಂಕುಳನ್ನು ಕೂಡ ಸರಿಯಾಗಿ ಪರೀಕ್ಷಿಸುವುದು ಬಹಳ ಮುಖ್ಯ. ಕೈಗಳನ್ನು ಮೇಲಕ್ಕೆತ್ತಿ ಕಂಕುಳನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಿ. ಆ ಭಾಗದಲ್ಲಿ ಯಾವುದೇ ರೀತಿಯ ಉಂಡೆ ಇದ್ದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಬೇಕು. ಸ್ತನದ ಸ್ವಯಂ-ಪರೀಕ್ಷೆ ಬಹಳ ಮುಖ್ಯ, ಆದರೆ ಅದಕ್ಕೆ ವಿಶೇಷ ಸಮಯವೂ ಇದೆ. ಅದು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಸ್ತನವನ್ನು ಸ್ವಯಂ-ಪರೀಕ್ಷೆ ಮಾಡಲು ಬಯಸಿದರೆ ಮುಟ್ಟು ಮುಗಿದು 3-5 ದಿನಗಳ ನಂತರ ಪರೀಕ್ಷಿಸಿ. 5 ದಿನಗಳ ನಂತರ ಸ್ತನದಲ್ಲಿನ ಊತವು ಕಡಿಮೆಯಾಗುತ್ತದೆ. ಪ್ರತಿ ತಿಂಗಳು ಮುಟ್ಟಿನ ಬಳಿಕ ಈ ರೀತಿ ಸ್ತನಗಳನ್ನು ಪರೀಕ್ಷಿಸಿಕೊಳ್ಳುವುದರಿಂದ ಸ್ತನ ಕ್ಯಾನ್ಸರ್ನಿಂದ ಪಾರಾಗಬಹುದು.