HomeIndiaತಾಯಿ ಪರೀಕ್ಷೆ ಬರೆಯುವಾಗ 6 ತಿಂಗಳ ಮಗುವನ್ನು ಆರೈಕೆ ಮಾಡಿದ ಮಹಿಳಾ ಪೊಲೀಸ್; ಹೃದಯಸ್ಪರ್ಶಿ ಫೋಟೋ...

ತಾಯಿ ಪರೀಕ್ಷೆ ಬರೆಯುವಾಗ 6 ತಿಂಗಳ ಮಗುವನ್ನು ಆರೈಕೆ ಮಾಡಿದ ಮಹಿಳಾ ಪೊಲೀಸ್; ಹೃದಯಸ್ಪರ್ಶಿ ಫೋಟೋ ವೈರಲ್

ಅಹಮದಾಬಾದ್‌: ಗುಜರಾತ್ ಹೈಕೋರ್ಟ್‌ನ ಪ್ಯೂನ್ ನೇಮಕಾತಿ ಪರೀಕ್ಷೆಗೆ ಮಹಿಳೆಯೊಬ್ಬರು ಆರು ತಿಂಗಳ ಮಗುವಿನ ಜೊತೆ ಹಾಜರಾಗಿದ್ದರು.

ಮಹಿಳೆ ಪರೀಕ್ಷೆ ಬರೆಯುತ್ತಿದ್ದಾಗ ಅಹಮದಾಬಾದ್ ಪೊಲೀಸ್‌ ಮಹಿಳಾ ಪೇದೆಯೊಬ್ಬರು ಅವರ ಮಗುವನ್ನು ನೋಡಿಕೊಂಡಿದ್ದಾರೆ. ಅಹಮದಾಬಾದ್ ಪೊಲೀಸರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳಾ ಪೇದೆ ಮಗುವನ್ನು ಹಿಡಿದುಕೊಂಡು ಆಟವಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಭಾನುವಾರ ಗುಜರಾತ್ ಹೈಕೋರ್ಟ್‌ನ ಪ್ಯೂನ್ ಹುದ್ದೆಗೆ ಪರೀಕ್ಷೆ ನಡೆದಿತ್ತು.

ಮಹಿಳೆಯೊಬ್ಬರು ತನ್ನ 6 ತಿಂಗಳ ಮಗುವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಪರೀಕ್ಷೆ ಆರಂಭವಾಗಬೇಕಿತ್ತು. ಈ ವೇಳೆ ಮಗು ಸಿಕ್ಕಾಪಟ್ಟೆ ಅಳುತ್ತಿತ್ತು.

ಮಗು ಅಳುತ್ತಿದ್ದುದನ್ನು ಕಂಡ ಪೊಲೀಸ್ ಪೇದೆ ದಯಾ ಬೆನ್ ಕೂಡಲೇ ಮಗುವನ್ನು ಕೈಗೆತ್ತಿಕೊಂಡಿದ್ದಾರೆ. ನೀವು ಪರೀಕ್ಷೆ ಬರೆಯಿರಿ, ನಾನು ಮಗುವನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಬಳಿಕ ಮಗುವನ್ನು ತಾವೇ ಆರೈಕೆ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳಾ ಪೊಲೀಸ್ ಪೇದೆಯ ಕಾರ್ಯಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular