HomeKarnatakaBIG NEWS: ಬಿಜೆಪಿ ಸತ್ಯಶೋಧನೆ ಟೀಮ್ ಗೆ ಆರಂಭದಲ್ಲೇ ಬಿಗ್ ಶಾಕ್

BIG NEWS: ಬಿಜೆಪಿ ಸತ್ಯಶೋಧನೆ ಟೀಮ್ ಗೆ ಆರಂಭದಲ್ಲೇ ಬಿಗ್ ಶಾಕ್

ಮೈಸೂರು: ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಶೋಧನೆಗೆ ಮುಂದಾಗಿರುವ ಬಿಜೆಪಿ ಟೀಮ್ ಗೆ ಆರಂಭದಲ್ಲೇ ಆಘಾತವಾಗಿದೆ ಎಂದು ಹೇಳಲಾಗುತ್ತಿದೆ.

ಮೈಸೂರಿನ ಟಿ. ನರಸಿಪುರದಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದ ಟೀಮ್ ಸತ್ಯಶೋಧನೆಗೆ ಮುಂದಾಗಿದೆ. ಆದರೆ ಆರಂಭದಲ್ಲಿಯೇ ಬಿಜೆಪಿಗೆ ಶಾಕ್ ಆಗಿದೆ. ಪ್ರಕರಣದಲ್ಲಿ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯೆಯ ತಮ್ಮನೇ ಆರೋಪಿ ಎಂಬುದು ಗೊತ್ತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣದ 6 ಪ್ರಮುಖ ಆರೋಪಿಗಳಲ್ಲಿ ಓರ್ವ ಆರೋಪಿ ಮೈಸೂರು ಮಹಾನಗರ ಪಾಲಿಕೆ ಬಿಜೆಪಿ ಸದಸ್ಯೆ ತಮ್ಮ ಶಂಕರ್ @ ತುಪ್ಪ ಎಂಬಾತ ಆರೋಪಿಯಾಗಿದ್ದು, ಆರೋಪಿ ವಿಚಾರ ತಿಳಿದು ಬಿಜೆಪಿ ಈಗ ಅಡಕತ್ತರಿಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಡೆ ತೀವ್ರಕುತೂಹಲ ಮೂಡಿಸಿದೆ.

 

For Latest News Updates, Join Our Whatsapp Community🚩
RELATED ARTICLES

Most Popular