
ಕರಾವಳಿ ಜಿಲ್ಲೆಗಳಲ್ಲಿ ಐದಾರು ದಿನಗಳಿಂದ ಸುರಿಯುತ್ತಿದ್ದ ಧಾರಾಕಾರ ಮಳೆ ಇಂದು ಕೊಂಚ ಕಡಿಮೆಯಾಗಿದೆ. ಈ ನಡುವೆ ಉಡುಪಿ ಜಿಲ್ಲೆಯಲ್ಲಿ ಮಳೆ ಇಂತರೂ ಅವಾಂತರಗಳು ಮಾತ್ರ ಕಡಿಮೆಯಾಗಿಲ್ಲ.
ಉಡುಪಿ ಜಿಲ್ಲೆಯ ಸಂತೆಕಟ್ಟೆ ಬಳಿ ರಾಷ್ತ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆ ಕುಸಿತಗೊಂಡಿದೆ. ಐದಾರು ದಿನಗಳಿಂದ ಸುರಿದ ಭಾರಿ ಮಳೆಯಿಂದ ಮಣ್ಣು ಸಡಿಲಗೊಂಡಿದ್ದು, ಬಹುಮಹಡಿ ಕಟ್ಟಡದ ಮುಂದಿನ ಸರ್ವಿಸ್ ರಸ್ತೆ ಕುಸಿದುಬಿದ್ದಿದೆ.

