ಆಂಡ್ರಾಯ್ಡ್ ಬಳಕೆದಾರರಿಗಾಗಿ ವಾಟ್ಸಾಪ್ ತನ್ನ ಇತ್ತೀಚಿನ ಬೀಟಾ ಅಪ್ಡೇಟ್ನಲ್ಲಿ ಅತ್ಯಾಕರ್ಷಕ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯದ ಅಡಿಯಲ್ಲಿ ಬಳಕೆದಾರರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡದೆಯೇ ವಾಟ್ಸಾಪ್ ವೆಬ್ಗೆ ಲಿಂಕ್ ಮಾಡಬಹುದಾಗಿದೆ. ಫೋನ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿ (Link with phone number) ಎಂಬ ಆಯ್ಕೆಯೊಂದಿಗೆ ನೀವು ಈ ಹೆಚ್ಚುವರಿ ಸೌಕರ್ಯವನ್ನು ಪಡೆಯಬಹುದಾಗಿದೆ.
ಈ ಹೊಸ ಆಯ್ಕೆಯು ಪ್ರಸ್ತುತ ಆಯ್ದ ಬೀಟಾ ಬಳಕೆದಾರರಿಗೆ ಲಭ್ಯವಿದೆ ಮತ್ತು ಹಂತ ಹಂತವಾಗಿ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಈ ವೈಶಿಷ್ಟ್ಯದೊಂದಿಗೆ, ಬಳಕೆದಾರರು ತಮ್ಮ ಪ್ರಾಥಮಿಕ ಖಾತೆಯ ಫೋನ್ ಸಂಖ್ಯೆ ಮತ್ತು WhatsApp ವೆಬ್‌ನಿಂದ ರಚಿಸಲಾದ ಒಂದು-ಬಾರಿ ಕೋಡ್ ಅನ್ನು ಬಳಸಿಕೊಂಡು ಸಾಧನವನ್ನು ಮನಬಂದಂತೆ ಲಿಂಕ್ ಮಾಡಬಹುದು.
ಪ್ರಸ್ತುತ ವಾಟ್ಸಾಪ್ ವೆಬ್ ಬಳಕೆ ಮಾಡುವಾಗ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಆದರೆ ಈ ಹೊಸ ಅಪ್ಡೇಟ್ನ ಬಳಕೆ ನೀವು ಮೊಬೈಲ್ ಸಂಖ್ಯೆಯನ್ನು ನಮೂದು ಮಾಡಿ ವಾಟ್ಸಾಪ್ ವೆಬ್ಗೆ ಎಂಟ್ರಿ ಪಡೆಯಬಹುದಾಗಿದೆ.
ಇದಕ್ಕಾಗಿ ನೀವು ಮೊದಲು ಡೆಸ್ಕ್ಟಾಪ್ನಲ್ಲಿ ವಾಟ್ಸಾಪ್ ವೆಬ್ ಓಪನ್ ಮಾಡಬೇಕು. ಇಲ್ಲಿ ಫೋನ್ ಸಂಖ್ಯೆಯೊಂದಿಗೆ ವಾಟ್ಸಾಪ್ ಓಪನ್ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ ನೀವು ದೇಶ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ಬಳಿಕ ನೀವು 8 ಸಂಖ್ಯೆಗಳ ಕೋಡ್ ಸ್ವೀಕರಿಸಲಿದ್ದೀರಿ. ಇದನ್ನು ನಮೂದಿಸಿದ ಬಳಿಕ ನೀವು ವಾಟ್ಸಾಪ್ ವೆಬ್ ಬಳಕೆ ಮಾಡಬಹುದಾಗಿದೆ .