
ಬೆಂಗಳೂರು : ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಟೊಮೆಟೊ ಮಾರಾಟಗಾರರು ಇದೀಗ ತಮ್ಮ ಅಂಗಡಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ.
ಹೌದು, ಗ್ರಾಹಕರು ದರ ಕೇಳುವ ನೆಪದಲ್ಲಿ ಟೊಮ್ಯೆಟೊ ಹಣ್ಣುಗಳನ್ನು ಕಳವು ಮಾಡುತ್ತಾರೆಂದು ಆತಂಕಗೊಂಡ ವ್ಯಾಪಾರಿಗಳು ಸಿಸಿ ಕ್ಯಾಮೆರಾ ಅಳವಡಿಸುತ್ತಿದ್ದಾರೆ. ತರಕಾರಿ ದರ ಕೇಳುವ ನೆಪದಲ್ಲಿ ಗ್ರಾಹಕರು ಒಂದೆರಡು ಟೊಮೇಟೊ ಹಣ್ಣುಗಳನ್ನು ಚೀಲದಲ್ಲಿ ಹಾಕಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಹಲವರು ತಮ್ಮ ಅಂಗಡಿಗಳಿಗೆ ಸಿಸಿ ಟಿವಿ ಕ್ಯಾಮ್ಯೆರಾ ಅಳವಡಿಸಿದ್ದಾರೆ.
ರಾಜ್ಯದಲ್ಲಿ ತರಕಾರಿ ದರಗಳು ಏರಿಕೆಯತ್ತ ಸಾಗಿದ್ದು, ಟೊಮ್ಯೆಟೊ ದರ ಕೆಜಿಗೆ 130 ರೂ. ಇದ್ರೆ ಬೆಳ್ಳುಳ್ಳಿ 140 ರೂ. ನುಗ್ಗೆ ಕಾಯಿ 110 ರೂ. ಬೀನ್ಸ್ 50 ರೂ. ಕ್ಯಾರೇಟ್ 80 ರೂ. ಹಸಿಮೆಣಸು 80-85 ರೂ., ಬದನೆಕಾಯಿ 45-50 ರೂವರೆಗೆ ಏರಿಕೆಯಾಗಿದೆ.