HomeKarnatakaBIG NEWS : ಶ್ರೀಗಳದ್ದೇ ಈ ರೀತಿ ಕೊಲೆಯಾದರೆ ರಾಜ್ಯದ ಜನರ ಪರಿಸ್ಥಿತಿಯೇನು? ಗೃಹ ಸಚಿವರಿಗೆ...

BIG NEWS : ಶ್ರೀಗಳದ್ದೇ ಈ ರೀತಿ ಕೊಲೆಯಾದರೆ ರಾಜ್ಯದ ಜನರ ಪರಿಸ್ಥಿತಿಯೇನು? ಗೃಹ ಸಚಿವರಿಗೆ MLC ಪ್ರಕಾಶ್ ಹುಕ್ಕೇರಿ ಪ್ರಶ್ನೆ

ಬೆಳಗಾವಿ: ನಂದಿಪರ್ವತ ಆಶ್ರಮದಲ್ಲಿ ಜೈನಮುನಿ ಹತ್ಯೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಸ್ವಾಮೀಜಿಯವರದ್ದೇ ಈ ರೀತಿ ಹತ್ಯೆಯಾದರೆ ಇನ್ನು ರಾಜ್ಯದ ಜನರ ಸ್ಥಿತಿ ಏನು? ಎಂದು ಎಂಎಲ್ ಸಿ ಪ್ರಕಾಶ್ ಹುಕ್ಕೇರಿ ಪ್ರಶ್ನಿಸಿದ್ದಾರೆ.

ಬೆಳಗಾವಿಯ ಹಿರೆಕೋಡಿಯ ನಂದಿಪರ್ವತ ಆಶ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ಹುಕ್ಕೇರಿ, ಜೈನಮುನಿಗಳ ಹತ್ಯೆ ಖಂಡನೀಯ. ಶ್ರೀಗಳದ್ದೇ ಈ ರೀತಿ ಹತ್ಯೆಯಾದರೇ ಇನ್ನು ರಾಜ್ಯದ ಜನರ ಪರಿಸ್ಥಿತಿ ಏನು? ನಾಳೆ ಜನರಿಗೆ ಏನು ರಕ್ಷಣೆ ಕೊಡುತ್ತೀರಿ? ಎಂದು ಗೃಹಸಚಿವರಿಗೆ ಕೇಳಿದ್ದೇನೆ ಎಂದಿದ್ದಾರೆ.

ಘಟನೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಪಡೆದು ಸೋಮವಾರ ಹೇಳಿಕೆ ಕೊಡುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular