ಬೆಂಗಳೂರು : ನಟ ಸುದೀಪ್ ಕಳುಹಿಸಿರುವ ಲೀಗಲ್ ನೋಟಿಸ್ ನನಗೆ ತಲುಪಿಲ್ಲ ಎಂದು ನಿರ್ಮಾಪಕ ಕುಮಾರ್ ಹೇಳಿಕೆ ನೀಡಿದ್ದಾರೆ.
ನಟ ಸುದೀಪ್ ವಿರುದ್ಧ ಕುಮಾರ್ ನೀಡಿರುವ ಹೇಳಿಕೆ ವಿಚಾರವಾಗಿ ನಟ ಸುದೀಪ್ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ಮಾಪಕ ಕುಮಾರ್ ನಟ ಸುದೀಪ್ ಕಳುಹಿಸಿರುವ ನೋಟಿಸ್ ನನಗೆ ತಲುಪಿಲ್ಲ, ವಾಟ್ಸಾಪ್ ನಿಂದ ಬಂದಿದೆ ಆದರೆ ಅಧಿಕೃತವಾಗಿ ಬಂದಿಲ್ಲ, ಸುದೀಪ್ 45 ಸಿನಿಮಾ ಮಾಡಿದ್ದಾರೆ ಅಗ್ರಿಮೆಂಟ್ ಕೊಡಲಿ. ನಂಬಿಕೆ ಮೇಲೆ ಸಿನಿಮಾ ರಂಗ ನಿಂತಿದೆ, ನಾನೇನು ತಪ್ಪು ಮಾಡಿಲ್ಲ, ಅಡ್ವಾನ್ಸ್ ಕೊಟ್ಟಿದ್ದೇನೆ ಎಂದು ನಿರ್ಮಾಪಕ ಕುಮಾರ್ ಹೇಳಿಕೆ ನೀಡಿದ್ದಾರೆ.
ಸ್ಯಾಂಡಲ್ ವುಡ್ ನಿರ್ಮಾಪಕ ಎಂ ಎನ್ ಕುಮಾರ್ ಮಾಡಿದ ಆರೋಪಗಳಿಗೆ ನಟ ಕಿಚ್ಚ ಸುದೀಪ್ ಉತ್ತರ ನೀಡಿದ್ದರು. ಕಿಚ್ಚ ಸುದೀಪ್ 10 ಕೋಟಿ ಹಣ ತೆಗೆದುಕೊಂಡು ಕೈಗೆ ಸಿಗುತ್ತಿಲ್ಲ ಎಂಬ ಆರೋಪಕ್ಕೆ ಸುದೀಪ್ ಲೀಗಲ್ ನೋಟಿಸ್ ಮೂಲಕ ಉತ್ತರ ನೀಡಿದ್ದರು.
ಕುಮಾರ್ ಮಾಡಿದ ಆರೋಪಕ್ಕೆ ಉತ್ತರ ನೀಡಿದ ಸುದೀಪ್ 10 ಕೋಟಿ ರೂ ಪರಿಹಾರ ನೀಡುವಂತೆ ನೋಟಿಸ್ ಕಳುಹಿಸಿದ್ದಾರೆ ಹಾಗೆಯೇ ಕ್ರಿಮಿನಲ್ ಕೇಸ್ ಕೂಡ ದಾಖಲಿಸಿದ್ದಾರೆ. ಸುದೀಪ್ ಕನ್ನಡ ಚಿತ್ರರಂಗದಲ್ಲಿ 20 ವರ್ಷದಿಂದ ನಟಿಸುತ್ತಿದ್ದಾರೆ, ಸಮಾಜ ಸೇವೆಯ ಮೂಲಕ ಹಲವರಿಗೂ ಮಾದರಿಯಾಗಿದ್ದಾರೆ, ನೀವು ಮಾಡಿರುವ ಆರೋಪ ಸುಳ್ಳಾಗಿದ್ದು, ಮಾನಹಾನಿ ಉಂಟು ಮಾಡಿದ್ದೀರಾ..? ನೀವು ಕ್ಷಮೆಯಾಚಿಸಬೇಕು ಹಾಗೂ ಪರಿಹಾರ ನೀಡಬೇಕು ಎಂದು ಸುದೀಪ್ ಪರ ವಕೀಲರು ಲೀಗಲ್ ನೋಟಿಸ್ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಅಧಾರ ರಹಿತ ಆರೋಪ ಮಾಡಿದ್ದಾರೆ. ಆದ್ದರಿಂದ ಮಾಧ್ಯಮಗಳ ಮೂಲಕ ಕ್ಷಮೆಯಾಚಿಸಬೇಕೆಂದು ನೋಟಿಸ್ ನಲ್ಲಿ ತಾಕೀತು ಮಾಡಿದ್ದಾರೆ.