HomeKarnatakaBIG NEWS: ಐತಿಹಾಸಿಕ ದಾಖಲೆಯ 14ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ; ಸಚಿವರು, ಶಾಸಕರಿಂದ ಅಭಿನಂದನೆ

BIG NEWS: ಐತಿಹಾಸಿಕ ದಾಖಲೆಯ 14ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ; ಸಚಿವರು, ಶಾಸಕರಿಂದ ಅಭಿನಂದನೆ

ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮುಕ್ತಾಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 14ನೇ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ 2 ಗಂಟೆ 50 ನಿಮಿಷಗಳ ಕಾಲ ನಿರಂತರವಾಗಿ ಬಜೆಟ್ ಓದಿದ್ದಾರೆ. ಬಜೆಟ್ ಮಂಡನೆ ಮುಗಿಯುತ್ತಿದ್ದಂತೆ ಸಚಿವರು, ಶಾಸಕರು ಅಭಿನಂದನೆ ಸಲ್ಲಿಸಿದರು. ಮುಖ್ಯಮಂತ್ರಿಯಾಗಿ 7 ಬಾರಿ ಬಜೆಟ್ ಮಂಡಿಸಿದ ಕಾರಣಕ್ಕೆ ಹಾಗೂ ಒಟ್ಟು 14 ಬಾರಿ ಆಯವ್ಯಯ ಮಂಡಿಸುವ ಮೂಲಕ ರಾಜ್ಯದಲ್ಲಿ ಹೊಸ ದಾಖಲೆ ಬರೆದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರನ್ನು ಅಭಿನಂದಿಸಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಾರಿಯ ಬಜೆಟ್ ಗಾತ್ರ 3,27,747 ಲಕ್ಷ ಕೋಟಿ ರೂ ಆಗಿದೆ. ಬಜೆಟ್ ನಲ್ಲಿ 22,441 ಕೋಟಿ ರೂ ಸಾಲ ಮರು ಪಾವತಿಗೆ ವ್ಯಯವಾಗಲಿದೆ. ಬಂಡವಾಳ ಹೂಡಿಕೆಗೆ 54,374 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular