HomeKarnatakaಪ್ರೀತ್ಸೆ ಪ್ರೀತ್ಸೆ ಎಂದು ಶಿಕ್ಷಕಿಗೆ ಸಹಶಿಕ್ಷಕನಿಂದಲೇ ಲೈಂಗಿಕ ಕಿರುಕುಳ: ದೂರು

ಪ್ರೀತ್ಸೆ ಪ್ರೀತ್ಸೆ ಎಂದು ಶಿಕ್ಷಕಿಗೆ ಸಹಶಿಕ್ಷಕನಿಂದಲೇ ಲೈಂಗಿಕ ಕಿರುಕುಳ: ದೂರು

ಚಿಕ್ಕಬಳ್ಳಾಪುರ: ಶಾಲೆಯಲ್ಲಿ ಸಹ ಶಿಕ್ಷಕಿಗೆ ಸಹೋದ್ಯೋಗಿ ಶಿಕ್ಷಕರನಿಂದ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ಆಚಾರ್ಯ ಪ್ರೌಢಶಾಲೆಯಲ್ಲಿ ಘಟನೆ ನಡೆದಿದೆ. ಶಿಕ್ಷಕನ ವಿರುದ್ಧ ಮಂಚೇನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಮಹಿಳೆಯರ ವಿಶ್ರಾಂತಿ ಕೊಠಡಿಗೆ ಆಗಮಿಸಿ ಶಿಕ್ಷಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ, ಶಾಲೆಯ ದಿನವಹಿ ದಾಖಲಾತಿ ನೀಡುವ ವಿಚಾರದಲ್ಲಿಯೂ ಕಿರಕುಳ ನೀಡಿದ್ದಾರೆ. ಮನೆಗೆ ಬಂದರೆ ಮಾತ್ರ ಶಾಲಾ ದಾಖಲಾತಿ ನೀಡುವುದಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಶಿಕ್ಷಕಿ ಹೋದ ಕಡೆಯಲ್ಲೆಲ್ಲ ಬೆನ್ನಟ್ಟಿ ಪ್ರೀತಿಸುವಂತೆ ಪೀಡಿಸಿದ್ದಾರೆ. ಸಹೋದ್ಯೋಗಿಯಿಂದ ಮನನೊಂದು ಪೊಲೀಸರ ಮೊರೆಹೋಗಿರುವ ಸಹ ಶಿಕ್ಷಕಿ ದೂರು ನೀಡಿದ್ದಾರೆ. ಶಿಕ್ಷಕಿ ದೂರಿನ ಮೇರೆಗೆ ಶಿಕ್ಷಕನ ವಿರುದ್ಧ ಕೇಸ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular