ಮಖಾನಾ ತುಂಬಾ ಆರೋಗ್ಯಕರ ಡ್ರೈ ಫ್ರೂಟ್‌ಗಳಲ್ಲೊಂದು. ಇದರಲ್ಲಿ ಉತ್ತಮ ಪ್ರಮಾಣದ ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ರಂಜಕವಿದೆ. ಮಖಾನಾವನ್ನು ಸಾಮಾನ್ಯವಾಗಿ ಡ್ರೈ ರೋಸ್ಟ್ ಮಾಡಿ ತಿನ್ನುತ್ತಾರೆ. ಕೆಲವೊಮ್ಮೆ ಸಿಹಿ ಭಕ್ಷ್ಯಗಳಲ್ಲೂ ಬಳಸುತ್ತಾರೆ. ಜನರು ಉಪವಾಸದ ಸಮಯದಲ್ಲಿ ಮಖಾನಾವನ್ನು ಸೇವಿಸುತ್ತಾರೆ.
ಮಖಾನಾ ತಿನ್ನುವುದರಿಂದ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಇದರಿಂದಾಗಿ ದೇಹಕ್ಕೆ ಶಕ್ತಿಯ ಕೊರತೆಯಾಗುವುದಿಲ್ಲ. ಆದರೆ ಮಖಾನವನ್ನು ಹಾಲಿನ ಜೊತೆ ಬೆರೆಸಿ ಸೇವನೆ ಮಾಡಬೇಕು. ಮಖಾನಾದಲ್ಲಿ ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳಿವೆ. ಆದ್ದರಿಂದ ಮಖಾನಾ ಸೇವನೆಯಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಮಖಾನಾವನ್ನು ಹಾಲಿನಲ್ಲಿ ಬೆರೆಸಿ ಸೇವಿಸಿದ್ರೆ ದುಪ್ಪಟ್ಟು ಲಾಭ ಸಿಗುತ್ತದೆ.
ಮಖಾನಾಗಳಲ್ಲಿ ಉತ್ತಮ ಪ್ರಮಾಣದ ಫೈಬರ್ ಇದೆ. ಆದ್ದರಿಂದ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುವಂತೆ ಭಾಸವಾಗುತ್ತದೆ, ಇದರಿಂದಾಗಿ ನಾವು ಮತ್ತೆ ಮತ್ತೆ ತಿನ್ನುವುದನ್ನು ತಪ್ಪಿಸಬಹುದು. ಈ ಮೂಲಕ ತೂಕವನ್ನು ನಿಯಂತ್ರಿಸಬಹುದು. ಮಖಾನಾ ನಮ್ಮ ಜೀರ್ಣಕ್ರಿಯೆಯನ್ನೂ ಆರೋಗ್ಯಕರವಾಗಿಡುತ್ತದೆ. ಮಖಾನವನ್ನು ಹಾಲಿನಲ್ಲಿ ಕುದಿಸಿ ಸೇವಿಸಿದರೆ ಮೂಳೆಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ. ಅಷ್ಟೇ ಅಲ್ಲ ಚರ್ಮ ಮತ್ತು ಕೂದಲು ಆರೋಗ್ಯಕರವಾಗಿ ಹೊಳಪು ಪಡೆಯುತ್ತವೆ. ಇದು ಕೂದಲಿಗೆ ಬಲ ನೀಡುತ್ತದೆ.