ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಹಲ್ಲುಗಳು ಪ್ರಧಾನ ಪಾತ್ರ ವಹಿಸುತ್ತವೆ, ಕೆಲವೊಮ್ಮೆ ನಾವು ಎಷ್ಟೇ ಬ್ರಶ್ ಮಾಡಿ ಏನೇ ಮಾಡಿದರೂ ಸಹ ಹಲ್ಲಿನ ಬಣ್ಣ ಮಾಸಿರುತ್ತದೆ. ಎಷ್ಟೇ ಪ್ರಯತ್ನಿಸಿದರೂ ಸಹ ಹಲ್ಲಿನ ಹೊಳಪು ಹೆಚ್ಚಾಗೋದೇ ಇಲ್ಲ. ನೀವು ಕೂಡ ಇಂತದ್ದೇ ಸಮಸ್ಯೆಯಿಂದ ಬಳಲಿದ್ದರೆ ನಿಮಗೊಂದು ಸಿಂಪಲ್ ಟಿಪ್ಸ್ ಇಲ್ಲಿದೆ.
ಇದಕ್ಕಾಗಿ ನೀವು ಹೆಚ್ಚೇನು ಮಾಡಬೇಕಿಲ್ಲ. ನಿಮ್ಮ ಮನೆಯಲ್ಲಿರುವ ಕೊಬ್ಬರಿ ಎಣ್ಣೆ ನಿಮ್ಮ ಈ ಸಮಸ್ಯೆಯನ್ನು ಕಡಿಮೆ ಮಾಡಬಲ್ಲದು. ಕೊಬ್ಬರಿ ಎಣ್ಣೆಯಲ್ಲಿ ಇರುವ ಲಾರಿಕ್ ಆಮ್ಲವು ಹಲ್ಲಿನ ಆರೋಗ್ಯವನ್ನು ಕೆಡಿಸುವಂತಹ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ.
ನೀವು ವಾರದಲ್ಲಿ ಎರಡು ಬಾರಿ ಕೊಬ್ಬರಿ ಎಣ್ಣೆಯಿಂದ ಹಲ್ಲನ್ನು ಮಸಾಜ್ ಮಾಡಬೇಕು, ಹೀಗೆ ಮಾಡೋದ್ರಿಂದ ಹಲ್ಲಿನ ಹೊಳಪು ಕ್ರಮೇಣವಾಗಿ ಹೆಚ್ಚೋದ್ರ ಜೊತೆ ಜೊತೆಯಲ್ಲಿ ದಂತ ಕ್ಷಯದ ಸಮಸ್ಯೆ ಕೂಡ ಮಾಯವಾಗುತ್ತದೆ. ಅಲ್ಲದೇ ಒಸಡುಗಳಲ್ಲಿ ಉಂಟಾಗುವ ಉರಿಯೂತವನ್ನೂ ಸಹ ಕೊಬ್ಬರಿ ಎಣ್ಣೆ ಶಮನ ಮಾಡುತ್ತದೆ.