ಬಣ್ಣದ ಲೋಕದಿಂದ ದೀರ್ಘ ವಿರಾಮ ಪಡೆದ ಸಮಂತಾ: ನಿರ್ಮಾಪಕರಿಗೆ ಅಡ್ವಾನ್ಸ್​ ಹಣ ವಾಪಸ್​ ಮಾಡಿದ ನಟಿ…..!

 

ಖ್ಯಾತ ನಟಿ ಸಮಂತಾ ರುತ್​ ಪ್ರಭು ಶೀಘ್ರದಲ್ಲಿಯೇ ಬಣ್ಣದ ಲೋಕದಿಂದ ದೀರ್ಘ ವಿರಾಮ ಪಡೆಯಲು ನಿರ್ಧರಿಸಿದ್ದಾರೆ. ಸಿಟಾಡೆಲ್​ ಹಾಗೂ ಕುಶಿ ಈ ಎರಡು ಸಮಂತಾರ ಸದ್ಯದ ಕೊನೆಯ 2 ಪ್ರಾಜೆಕ್ಟ್​ಗಳಾಗಿವೆ. ದಾಂಪತ್ಯ ಜೀವನದಲ್ಲಿ ಬಿರುಕು ಹಾಗೂ ಆರೋಗ್ಯ ಸಮಸ್ಯೆಗಳ ನಡುವೆಯೂ ಕಳೆದ ವರ್ಷದವರೆಗೂ ಸಮಂತಾ ತಮ್ಮ ವೃತ್ತಿ ಜೀವನಕ್ಕೆ ಬದ್ಧರಾಗಿದ್ದರು. ಆದರೆ ಇದೀಗ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದ್ದು ಮೈಯೋಸಿಟಿಸ್​ಗೆ ಹೆಚ್ಚುವರಿ ಚಿಕಿತ್ಸೆಗಾಗಿ ಒಂದು ವರ್ಷಗಳ ಕಾಲ ವೃತ್ತಿ ಜೀವನಕ್ಕೆ ವಿರಾಮ ಘೋಷಿಸಲು ನಿರ್ಧರಿಸಿದ್ದಾರೆ.

ಸೆರ್ಬಿಯಾದಲ್ಲಿ ವರುಣ್ ಧವನ್ರೊಂದಿಗೆ ಸಿಟಾಡೆಲ್ ಇಂಡಿಯಾದ ಕೊನೆಯ ಶೆಡ್ಯೂಲ್ ಮುಗಿಸಿದ ನಂತರ, ಸಮಂತಾ ಇದೀಗ ವಿಜಯ್ ದೇವರಕೊಂಡರೊಂದಿಗೆ ಕುಶಿ ಚಿತ್ರೀಕರಣದಲ್ಲಿದ್ದಾರೆ. ಇನ್ನು ಎರಡ್ಮೂರು ದಿನಗಳಲ್ಲಿ ಚಿತ್ರದ ಅಂತಿಮ ಶೂಟಿಂಗ್ ಶೆಡ್ಯೂಲ್ ಪೂರ್ಣಗೊಳ್ಳಲಿದ್ದು, ಆ ಬಳಿಕ ತಮ್ಮ ಆರೋಗ್ಯದ ಕಡೆ ಗಮನ ಹರಿಸಲು ಸಮಂತಾ ನಿರ್ಧರಿಸಿದ್ದಾರೆ.

ವರದಿಗಳ ಪ್ರಕಾರ, ಸ್ಯಾಮ್ ಬಾಲಿವುಡ್ ಅಥವಾ ಯಾವುದೇ ಭಾಷೆಯಲ್ಲಿ ಒಂದು ವರ್ಷದವರೆಗೆ ಯಾವುದೇ ಹೊಸ ಚಿತ್ರಕ್ಕೆ ಸಹಿ ಹಾಕುವ ಯೋಜನೆ ಹೊಂದಿಲ್ಲ. ಅಲ್ಲದೇ ಕುಶಿ ಸಿನಿಮಾದ ಬಳಿಕ ಯಾವೆಲ್ಲ ನಿರ್ಮಾಪಕರಿಂದ ಮುಂಗಡ ಹಣ ಪಡೆದಿದ್ದರೋ ಅವೆಲ್ಲವನ್ನು ಸಮಂತಾ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read