ಸಂಸ್ಕೃತದ ಜಂಬೂ ಫಲವೇ ನೇರಳೆ ಹಣ್ಣು. ಕೆಲವೊಬ್ಬರು ಇದನ್ನು ಜಂಬೂ ನೇರಳೆ ಎಂದೂ ಕರೆಯುವುದುಂಟು. ಇದು ವರ್ಷವಿಡೀ ಸಿಗುವ ಹಣ್ಣಲ್ಲ. ಕಪ್ಪು ಬಣ್ಣದ ಹೊಳೆಯುವ ಈ ಹಣ್ಣು ಮಾರುಕಟ್ಟೆಯಲ್ಲಿ ಸಿಗುವುದು ಕೆಲವೇ ಕೆಲವು ತಿಂಗಳು ಮಾತ್ರ. ಮಧುಮೇಹ ಸಮಸ್ಯೆ ಇರುವವರಿಗೆ ಇದು ಉತ್ತಮ ಹಣ್ಣು ಎಂಬ ಕಾರಣಕ್ಕೆ ಇದರ ಬೇಡಿಕೆ ಹೆಚ್ಚು.
ಆದರೆ ಕೇವಲ ಮಧುಮೇಹದವರಿಗೆ ಮಾತ್ರವಲ್ಲ, ಇತರ ಅನೇಕ ಸಮಸ್ಯೆಗಳಿಗೆ ನೇರಳೆ ರಾಮಬಾಣ. ನೇರಳೆ ಮರದ ತೊಗಟೆಯ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ವಸಡಿನ ರಕ್ತಸ್ರಾವ ತಡೆಗಟ್ಟಬಹುದು.
ನೇರಳೆ ಎಲೆಗಳನ್ನು ಅರೆದು ಸುಟ್ಟಗಾಯಕ್ಕೆ ಹಚ್ಚಿದರೆ ಗಾಯ ಬೇಗ ಮಾಯುತ್ತದೆ. ನೇರಳೆ ಹಣ್ಣು ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ಜೀರ್ಣ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.
ನೇರಳೆ ಶರಬತ್ತು ಮಕ್ಕಳಲ್ಲಿ ಉಂಟಾಗುವ ಅತಿಯಾದ ಭೇದಿಯನ್ನು ನಿಯಂತ್ರಣದಲ್ಲಿ ಇರಿಸುತ್ತದೆ.