ನವದೆಹಲಿ : ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೇರಿ ಕೋಮ್ ಅವರಿಗೆ 5 ನೇ ವಾರ್ಷಿಕ ಯುಕೆ-ಇಂಡಿಯಾ ಪ್ರಶಸ್ತಿಗಳಲ್ಲಿ ‘ಗ್ಲೋಬಲ್ ಇಂಡಿಯನ್ ಐಕಾನ್ ಆಫ್ ದಿ ಇಯರ್’ ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಮೇರಿ ಕೋಮ್, ಈ ಪ್ರಶಸ್ತಿ ಸಿಕ್ಕಿರುವುದು ನನ್ನ ಸೌಭಾಗ್ಯ ಮತ್ತು ಗೌರವ. ನಾನು 20 ವರ್ಷಗಳಿಂದ ಹೋರಾಡುತ್ತಿದ್ದೇನೆ ಮತ್ತು ನನ್ನ ಜೀವನದಲ್ಲಿ, ಬಾಕ್ಸಿಂಗ್ ನಲ್ಲಿ ನನ್ನ ದೇಶಕ್ಕಾಗಿ, ನನ್ನ ಕುಟುಂಬಕ್ಕಾಗಿ ತ್ಯಾಗ ಮಾಡಲು ಸಾಕಷ್ಟು ಶ್ರಮಿಸಿದ್ದೇನೆ. ನಾನು ನನ್ನ ಹೃದಯಾಂತರಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
ಜೂನ್ 29 ರಂದು ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಬ್ರಿಟನ್ ನ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರು ಮೇರಿಕೋಮ್ ಗೆ ಪ್ರಶಸ್ತಿ ಪ್ರದಾನ ಮಾಡಿದರು. ಯುಕೆ-ಇಂಡಿಯಾ ವೀಕ್ ಅಂಗವಾಡಿ ಐಜಿಎಫ್ ಈ ಪ್ರಶಸ್ತಿ ಸಮಾರಂಭ ಆಯೋಜನೆ ಮಾಡಿತ್ತು.