
ಈ ನಾಲ್ಕು ದಿನಗಳು ಕೂಡ ಬೆಳಗ್ಗೆ 9:30 ರಿಂದ ದಾಖಲಾತಿ ಪರಿಶೀಲನಾ ಕಾರ್ಯ ಆರಂಭವಾಗಲಿದ್ದು, ಮಾಹಿತಿಗೆ ಪ್ರಾಧಿಕಾರದ ಜಾಲತಾಣ ವೀಕ್ಷಿಸಬಹುದಾಗಿದೆ ಎಂದು ಪರೀಕ್ಷಾ ಪ್ರಾಧಿಕಾರದ ಜಾಲತಾಣ http://kea.kar.nic.in ವೀಕ್ಷಿಸಬಹುದು ಎಂದು ನಿರ್ದೇಶಕಿ ಎಸ್ ರಮ್ಯಾ ಹೇಳಿದ್ದಾರೆ. ವಿವಿಧ ವ್ಯಾಸಂಗ ಪ್ರಮಾಣ ಪತ್ರ ಪರಿಶೀಲನೆ, ಆನ್ಲೈನ್ ದಾಖಲಾತಿ ಪರಿಶೀಲನೆಯ ಬಗ್ಗೆ ಪ್ರಾಧಿಕಾರದ ವೆಬ್ಸೈಟಿನಲ್ಲಿ ಪೋಸ್ಟ್ ಮಾಡಿರುವ ಸೂಚನೆಗಳನ್ನು ಮತ್ತು ಮಾರ್ಗದರ್ಶನಗಳನ್ನು ಅಭ್ಯರ್ಥಿಗಳು ಮತ್ತು ಪೋಷಕರು ಓದಿಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ, ಅಲ್ಲಿ ಇರುವ ಯುಜಿಸಿಇಟಿ 2023ರ ಮಾಹಿತಿ ಪುಸ್ತಕವನ್ನು ಡೌನ್ಲೋಡ್ ಮಾಡಿಕೊಂಡು, ಪರಿಶೀಲಿಸಿಕೊಳ್ಳಬಹುದಾಗಿದೆ.

