
ಧಾರವಾಡದಿಂದ ಮಧ್ಯಾಹ್ನ ರೈಲು ವಾಪಸ್ ಬೆಂಗಳೂರಿಗೆ ತೆರಳುವಾಗ ದಾವಣಗೆರೆ ಬಳಿ ಕಿಡಿಗೇಡಿಯೊಬ್ಬ ಕಲ್ಲು ತೋರಿ ಪರಾರಿಯಾಗಿದ್ದಾನೆ. ಕಲ್ಲು ತಾಗಿದ ರಭಸಕ್ಕೆ ಗಾಜಿಗೆ ಹಾನಿಯಾಗಿದೆ. ಈ ಕುರಿತು ರೈಲ್ವೆ ಆರ್ಪಿಎಫ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ಕು ದಿನದ ಹಿಂದೆ ಆರಂಭವಾದ ಹೊಸ ಹೈಸ್ಪೀಡ್ ರೈಲು ವಂದೇಭಾರತ್ ರೈಲಿಗೆ ಕಲ್ಲು ಹೊಡೆಯಲಾಗಿದೆ. ಇತ್ತೀಚೆಗೆ ರೈಲಿಗೆ ಕಲ್ಲು ಹೊಡೆಯುವ ಪ್ರಕರಣಗಳು ಸಾಕಷ್ಟು ವರದಿಯಾಗಿರುವುದು ಆತಂಕ ಮೂಡಿಸಿದೆ.

