alex Certify BREAKING NEWS : ಇಂದು ಮಧ್ಯರಾತ್ರಿಯಿಂದಲೇ ‘ಗೃಹಜ್ಯೋತಿ’ ಯೋಜನೆ ಜಾರಿ : ಅರ್ಜಿ ಸಲ್ಲಿಸಿದವರಿಗೆ ಮಾತ್ರ ಉಚಿತ ವಿದ್ಯುತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS : ಇಂದು ಮಧ್ಯರಾತ್ರಿಯಿಂದಲೇ ‘ಗೃಹಜ್ಯೋತಿ’ ಯೋಜನೆ ಜಾರಿ : ಅರ್ಜಿ ಸಲ್ಲಿಸಿದವರಿಗೆ ಮಾತ್ರ ಉಚಿತ ವಿದ್ಯುತ್

ಬೆಂಗಳೂರು : ‘ಗೃಹ ಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಇಂಧನ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಇಂದು ಮಧ್ಯರಾತ್ರಿಯಿಂದಲೇ   ಗೃಹಜ್ಯೋತಿ ಯೋಜನೆ ಜಾರಿಯಾಗಲಿದ್ದು, ಅರ್ಜಿ ಸಲ್ಲಿಸಿದವರಿಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುತ್ತದೆ.

ಜೂನ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದವರಿಗೆ ಜುಲೈ ತಿಂಗಳಿನಿಂದ ಉಚಿತ ವಿದ್ಯುತ್ ನೀಡಲಾಗುತ್ತದೆ. , ಜುಲೈ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದ್ರೆ ಆಗಸ್ಟ್ ತಿಂಗಳಿನಿಂದ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಇಂಧನ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡರೆ ಉಚಿತ ವಿದ್ಯುತ್ ನೀಡುವುದಿಲ್ಲ, ಬಾಕಿ ಹಣವನ್ನು ಕಟ್ಟಲೇಬೇಕು ಎಂದು ಇಂಧನ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 200 ಯೂನಿಟ್ ಗಿಂತ ಹೆಚ್ಚುವರಿ ಯೂನಿಟ್ ಗಳಿಗೆ ಮಾತ್ರ ಕರೆಂಟ್  ಬಿಲ್  ಕಟ್ಟಬೇಕು  .ಇಂದು ಮಧ್ಯರಾತ್ರಿಯಿಂದ ಉಚಿತ ವಿದ್ಯುತ್  ಯೋಜನೆ   ಜಾರಿಯಾಗಲಿದೆ.

5 ನಿಮಿಷದಲ್ಲಿ ಗೃಹಜ್ಯೋತಿಗೆ ಅರ್ಜಿ ಸಲ್ಲಿಸುವುದು ಹೇಗೆ

ಬೆಂಗಳೂರು : ಗೃಹಜ್ಯೋತಿಯಡಿ ಉಚಿತ ವಿದ್ಯುತ್ ಪಡೆಯಲು ಕೇವಲ 5 ನಿಮಿಷದಲ್ಲಿ ಅರ್ಜಿ ಸಲ್ಲಿಸುವುದು ಹೇಗೆ. ಇಲ್ಲಿದೆ ನೋಡಿ ಮಾಹಿತಿ. “ಗೃಹ ಜ್ಯೋತಿ” ಯೋಜನೆಗೆ ನಿಮ್ಮ ಸ್ಮಾರ್ಟ್ ಫೋನ್, ಕಂಪ್ಯೂಟರ್/ ಲ್ಯಾಪ್ಟಾಪ್ ಗಳಿಂದ ಅರ್ಜಿ ಸಲ್ಲಿಸಬಹುದು.

ಬೇಕಾಗುವ ದಾಖಲೆಗಳು
1) ವಿದ್ಯುತ್ ಬಿಲ್
2) ಆಧಾರ್ ಸಂಖ್ಯೆ
3) ಆಧಾರ್ ಕಾರ್ಡ್ ನಲ್ಲಿರುವ ಪೋನ್ ಸಂಖ್ಯೆಯಿರುವ ಮೊಬೈಲ್.. ಈ ಮೂರು ಇದ್ದರೆ ಸಾಕು..ಸೈಬರ್ ಸೆಂಟರ್, ನಾಡ ಕಚೇರಿ- ಕರ್ನಾಟಕ ಒನ್, ಎಸ್ಕಾಂ ಕಚೇರಿಗಳಿಗೆ ಹೋಗುವ ಅವಶ್ಯಕತೆಯೂ ಇಲ್ಲ..

1) https://sevasindhugs.karnataka.gov.in/ ಗೆ ಭೇಟಿ ನೀಡಿ
2) ನಿಮ್ಮದು ಯಾವ ಎಸ್ಕಾಂ- ESCOM ಅಂತ ಟಿಕ್ ಮಾಡಿ
3) ನಂತರ ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ 10 ಸಂಖ್ಯೆಯ Account ID ಟೈಪ್ ಮಾಡಿ..
ಮನೆ ವಿಳಾಸ ತಾನಾಗೆ ಮೂಡುತ್ತದೆ
4) ಮುಂದೆ ಸ್ವಂತ ಮನೆನಾ ಅಥವಾ ಬಾಡಿಗೆ ಮನೆನಾ ಅಂತ ಟಿಕ್ ಮಾಡಿ
5) ಅರ್ಜಿದಾರರ ಮನೆಯ ಯಜಮಾನ/ ಯಜಮಾನಿಯ( ಬಾಡಿಗೆ ಇದ್ದರೆ ಬಾಡಿಗೆಯವರು) ಆಧಾರ್ ಕಾರ್ಡ್ ನ 12 ಸಂಖ್ಯೆ ಟೈಪ್ ಮಾಡಿ , ನಂತರ ಆಧಾರ್ e – KYC ಕೇಳುತ್ತದೆ.. OK ಮಾಡಿದರೆ ಹೊಸ ಪೇಜ್ ತೆರೆದುಕೊಳ್ಳುತ್ತದೆ..
6) ಅಲ್ಲಿ OK ಅಂತ ಟಿಕ್ ಮಾಡಿ.. ಆಧಾರ್ ಕಾರ್ಡ್’ನಲ್ಲಿ ಇರುವ ಫೋನ್ ನಂಬರ್’ಗೆ OTP( ಒಟಿಪಿ) ಸಂಖ್ಯೆ ಬರುತ್ತದೆ.. ಅದನ್ನ ಟೈಪಿಸಿ OK ಮಾಡಿ, e – KYC ಮುಗಿಯಿತು..
7) ನಂತರ ಮುಂದಿನ ಬಾಕ್ಸ್’ ನಲ್ಲಿ ಸಂಪರ್ಕಕ್ಕಾಗಿ ಫೋನ್ ಸಂಖ್ಯೆ ಟೈಪಿಸಿ.. ಈ ಸಂಖ್ಯೆಗೆ ಮತ್ತೊಂದು OTP (ಒಟಿಪಿ) ಬರುತ್ತದೆ.. ಅದನ್ನ ಟೈಪಿಸಿ OK ಮಾಡಿ.
8) ಕೆಳಗೆ I agree ಅಂತ ಇರುವ ಡಿಕ್ಲೆರೇಶನ್’ಗೆ right tick mark ಮಾಡಿ..
9) ಕೆಳಗೆ Word verification ಅಂತ ತೋರಿಸುವ 6 ಸಂಖ್ಯೆಯನ್ನ, ಅಲ್ಲಿನ ಬಾಕ್ಸ್’ನಲ್ಲಿ ಟೈಪ್ ಮಾಡಿ submit ಮಾಡಿ..
10) ನಿಮ್ಮ ಅರ್ಜಿಯ ಒಟ್ಟು ಮಾಹಿತಿಯ ಹೊಸ ಪೇಜ್ ತೆರೆದುಕೊಳ್ಳುತ್ತದೆ, ಮತ್ತೆ submit ಅಂತ ಕೊಡಿ..
11) ನಿಮ್ಮ ಅರ್ಜಿಯ ಸಂಖ್ಯೆಯೊಂದಿಗೆ ಸ್ವೀಕೃತಿ ಪ್ರತಿಯ ಪಿಡಿಎಫ್ ಬರುತ್ತದೆ.. ಅದನ್ನ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...