HomeKarnatakaBIG NEWS: ಕಷ್ಟಪಟ್ಟು ಬಿಳಿ ಶರ್ಟ್ ಹಾಕಿಕೊಂಡಿರ್ತೇವೆ, ನೀವು ಬಂದು ಉಗಿದು ಹೋಗಿರ್ತೀರಿ; ಬಿಜೆಪಿ ಸಭೆಯಲ್ಲಿ...

BIG NEWS: ಕಷ್ಟಪಟ್ಟು ಬಿಳಿ ಶರ್ಟ್ ಹಾಕಿಕೊಂಡಿರ್ತೇವೆ, ನೀವು ಬಂದು ಉಗಿದು ಹೋಗಿರ್ತೀರಿ; ಬಿಜೆಪಿ ಸಭೆಯಲ್ಲಿ ಗರಂ ಆದ ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು: ಸ್ವಪಕ್ಷದ ನಾಯಕರ ವಿರುದ್ಧ ಹಾಗೂ ಪಕ್ಷದ ವಿರುದ್ಧವೇ ಬಹಿರಂಗವಾಗಿ ಹೇಳಿಕೆ ಕೊಡುತ್ತಿರುವ ರಾಜ್ಯ ಬಿಜೆಪಿ ನಾಯಕರು, ಕಾರ್ಯಕರ್ತರ ವಿರುದ್ಧ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಗರಂ ಆಗಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ರಾಜಕಾರಣದಲ್ಲಿ ಕಷ್ಟ ಪಟ್ಟು ಬಿಳಿ ಶರ್ಟ್ ಹಾಕಿಕೊಂಡಿರ್ತೇವೆ. ನೀವು ಬಂದು ಉಗಿದು ಹೋಗ್ತಿರ್ತೀರಿ. ಆರೋಪದ ಶಾಯಿ ತೆಗೆದು ನಮಗೆ ಎಸೆಯುತ್ತಿರ್ತೀರಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬೆನ್ನಲ್ಲೇ ಬಿಜೆಪಿ ಕೆಲ ನಾಯಕರು ಸ್ವಪಕ್ಷದ ನಾಯಕರ ನಿರ್ಧಾರ, ಹೊಂದಾಣಿಕೆ ರಾಜಕಾರಣದ ಬಗ್ಗೆ ಬಹಿರಂಗವಾಗಿ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಸಭೆ ಕರೆಯಲಾಗಿತ್ತು.

For Latest News Updates, Join Our Whatsapp Community🚩
RELATED ARTICLES

Most Popular